‘ಜಸ್ಟ್ ಅಸ್’ ಅಂತ ವೆಬ್ ಸಿರೀಸ್ ಲೋಕಕ್ಕೆ ನಿರ್ದೇಶಕ ಪಿ.ಸಿ.ಶೇಖರ್ ಎಂಟ್ರಿ

2 Min Read

ನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ಮೊದಲ ವೆಬ್ ಸಿರೀಸ್ ನಿರ್ದೇಶಿಸಿದ್ದಾರೆ. ಎಂಟು ಕಂತುಗಳ ಈ ವೆಬ್ ಸಿರೀಸ್‌ಗೆ Just us ಎಂದು ನಾಮಕರಣ ಮಾಡಿದ್ದಾರೆ. ಜನವರಿ ಒಂದರಂದು ಹೊಸವರ್ಷದ ಮೊದಲ ದಿನ ಈ ವೆಬ್ ಸಿರೀಸ್‌ನ ಮೊದಲನೇ ಕಂತು ಪ್ರಸಾರವಾಗಲಿದೆ.

ಈ ಕುರಿತು ಮಾತನಾಡುವ ನಿರ್ದೇಶಕ ಪಿ.ಸಿ.ಶೇಖರ್ (P.C.Shekar), ಇಷ್ಟು ದಿನ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನಾನು, ಇದೇ ಮೊದಲ ಬಾರಿಗೆ ವೆಬ್ ಸಿರೀಸ್ ನಿರ್ದೇಶನ ಮಾಡಿದ್ದೇನೆ. ವಿವೇಕ್ ಹಾಗೂ ಮೇಘ ಜಾದವ್ ಎಂಬ ನೂತನ ಪ್ರತಿಭೆಗಳು ಈ ವೆಬ್ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ. ಈ ವೆಬ್ ಸಿರೀಸ್ ಒಂದು ವಿಭಿನ್ನ ಕಥೆ. ಎಂಜಿನಿಯರಿಂಗ್ ಮಾಡಬೇಕಾದರೆ ಬಿ.ಇ ಮಾಡಬೇಕು. ಡಾಕ್ಟರ್ ಆಗಬೇಕೆಂದರೆ ಎಂಬಿಬಿಎಸ್ ಮಾಡಬೇಕು. ಕಾರು ಚಾಲನೆ ಮಾಡಬೇಕಾದರೂ ಸಹ ತರಭೇತಿ ಬೇಕು. ಹೀಗೆ ಎಲ್ಲದ್ದಕ್ಕೂ ಒಂದೊಂದು ರೀತಿ ಇದೆ. ಆದರೆ, ಮದುವೆ ವಿಷಯಕ್ಕೆ ಬಂದಾಗ ಹುಡುಗ-ಹುಡುಗಿಯನ್ನು ಮನೆಯವರು ಮಾತನಾಡಿ ಎಂದು ಹೇಳಿದಾಗ ಏನು ಮಾತನಾಡಬೇಕೆಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಾಗಿ, ನಾನು ಸೈಕಿಯಾರ್ಟಿಸ್ಟ್ ಹಾಗೂ ಮ್ಯಾರೇಜ್ ಕೌನ್ಸಿಲರ್ ಮುಂತಾದವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ಮಾಡಿ ಕೆಲವು ವಿಷಯಗಳನ್ನು ಸಂಗ್ರಹ ಮಾಡಿ ಈ ವೆಬ್ ಸಿರೀಸ್ ಮೂಲಕ ಜನರಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದೇ ಕಥಾವಸ್ತು. ಇದರ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಸಹ ಇರಲಿದೆ. ಇದನ್ನೂ ಓದಿ: ಪ್ರಶಾಂತ್ ನೀಲ್ ಜೊತೆಗಿನ ಉಗ್ರಂ ವೀರಂ ಸಿನಿಮಾ ಬಗ್ಗೆ ಶ್ರೀಮುರಳಿ ಹೇಳಿದ್ದೇನು?

ವಿವೇಕ್ ಹಾಗೂ ಮೇಘ ಜಾದವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ವೆಬ್ ಸಿರೀಸ್‌ಗೆ ನನ್ನ ಜೊತೆಗೆ ನಾಯಕ ಹಾಗೂ ಟೆರರಿಸ್ಟ್ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಮುರಳಿ ಕ್ರಿಶ್ ಅವರ ಛಾಯಾಗ್ರಹಣವಿದೆ. ಈ ವೆಬ್ ಸಿರೀಸ್‌ನಲ್ಲಿ ಒಂದು ಹಾಡಿದ್ದು, ಎಸ್.ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ನಾಗಸಿಂಹ ಭಾರದ್ವಾಜ್ ಹಾಡನ್ನು ಬರೆದಿದ್ದಾರೆ. ಶ್ರಾವಂತಿ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಈ ಟೈಟಲ್ ಸಾಂಗ್, MTV ಆಲ್ಬಂ ಸಾಂಗ್ ತರಹ ಅದ್ಭುತವಾಗಿ ಮೂಡಿಬಂದಿದ್ದು, ವೆಬ್ ಸಿರೀಸ್‌ನಲ್ಲಿ ಏನೆಲ್ಲಾ ಇರಬಹುದು ಎಂಬುದನ್ನು ಈ ಹಾಡಿನಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಡಿ.22 ರಂದು ಈ ಹಾಡು ಬಿಡುಗಡೆಯಾಗಲಿದೆ. ಈಗಿನ ಯುವಜನತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮನೋರಂಜನೆಯ ಪ್ರಧಾನ ಮಾಡಿಕೊಂಡು ಎಂಟು ಕಂತುಗಳ ಈ ವೆಬ್ ಸಿರೀಸ್ ಮಾಡಿದ್ದೀನಿ. ನನ್ನ ಹೊಸಪ್ರಯತ್ನ ಹೊಸವರ್ಷದ ಮೊದಲ ದಿನದಿಂದ ನಿಮ್ಮ ಮುಂದೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಪಿ.ಸಿ.ಶೇಖರ್.

ನಾನು ಮೈಸೂರಿನವನು. ರಂಗಭೂಮಿ ಕಲಾವಿದ. ನಟನದಲ್ಲಿ ಕಲಿತಿದ್ದೇನೆ. ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ ವೆಬ್ ಸಿರೀಸ್ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ವೆಬ್ ಸಿರೀಸ್‌ನಲ್ಲಿ ನಟಿಸಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟ ವಿವೇಕ್. ಇದನ್ನೂ ಓದಿ: ಬಾಲಿವುಡ್‌ಗೆ ಜಿಗಿದ ʻಕನಕವತಿʼ – ರಶ್ಮಿಕಾ, ಶ್ರೀಲೀಲಾ ಹಾದಿಯಲ್ಲಿ ರುಕ್ಮಿಣಿ ವಸಂತ್!

ನಾನು ಸಾಫ್ಟ್‌ವೇರ್‌ ಎಂಜಿನಿಯರ್. ಐಟಿ ಉದ್ಯೋಗಿ. ನಟನೆ ನನ್ನ ಹವ್ಯಾಸ. ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಿಗೆ ಕಂಠದಾನ ಕಲಾವಿದೆಯಾಗೂ ಕಾರ್ಯನಿರ್ವಹಿಸಿದ್ದೇನೆ. ಪಿ.ಸಿ.ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದೇನೆ. ಆ ಮೂಲಕ ವೆಬ್ ಸಿರೀಸ್‌ನಲ್ಲಿ ನಟಿಸುವ ಅವಕಾಶ ದೊರಕಿತು. ಈ ವೆಬ್ ಸಿರೀಸ್‌ನಲ್ಲಿ ಅಭಿನಯಿಸಿರುವುದು ಬಹಳ ಸಂತೋಷವಾಗಿದೆ ಎಂದು ನಟಿ ಮೇಘಾ ಜಾಧವ್ ತಿಳಿಸಿದ್ದಾರೆ.

Share This Article