ಬೌದ್ಧ ಬಿಕ್ಕುಗಳಿಗೆ ಸರ್ಕಾರದಿಂದ ಮಾಸಿಕ ಗೌರವ ಧನ: ರಾಮಲಿಂಗಾರೆಡ್ಡಿ

1 Min Read

ಬೆಳಗಾವಿ: ಬೌದ್ಧ ಬಿಕ್ಕುಗಳಿಗೆ (Buddhist Monks) ಸರ್ಕಾರದಿಂದಲೇ ಮಾಸಿಕ ಗೌರವ ಧನ ಕೊಡಲಿದೆ ಅಂತ ಸರ್ಕಾರ ಘೋಷಣೆ ಮಾಡಿದೆ.

ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಿವಕುಮಾರ್ ಪ್ರಶ್ನೆ ಕೇಳಿದರು. ಬುದ್ಧ ವಿಹಾರಗಳು ನಡೆಸೋಕೆ ಸರ್ಕಾರ ಗ್ರ್ಯಾಂಟ್ ಕೊಡಬೇಕು. 80 ಬುದ್ಧ ವಿಹಾರಗಳು ಇವೆ. 200 ಬೌದ್ಧ ಬಿಕ್ಕುಗಳು ಇದರಲ್ಲಿ ಕೆಲಸ ಮಾಡ್ತಿದ್ದಾರೆ. ಇವರಿಗೆ ಮಾಸಿಕ ಸಂಭಾವನೆ ನೀಡಬೇಕು. 6 ಸಾವಿರ ರೂ. ಬೌದ್ಧ ಬಿಕ್ಕುಗಳಿಗೆ ಕೊಡಬೇಕು. ಅವರ ಸೇವಕರಿಗೆ 5 ಸಾವಿರ ಕೊಡಬೇಕು ಅಂತ ಆಗ್ರಹಿಸಿದರು. ಇದನ್ನೂ ಓದಿ: 15 ವರ್ಷ ಮೀರಿದ ವಾಹನಗಳ ಸ್ಕ್ರ್ಯಾಪ್‍ಗೆ ಸರ್ಕಾರದಿಂದ ಅನುಮೋದನೆ: ರಾಮಲಿಂಗಾರೆಡ್ಡಿ

ಇದಕ್ಕೆ ಸಚಿವ ಜಮೀರ್ ಪರವಾಗಿ ರಾಮಲಿಂಗಾರೆಡ್ಡಿ ಉತ್ತರ ನೀಡಿ, ಜೈನ ಬಸದಿ ಅರ್ಚಕರಿಗೆ 6 ಸಾವಿರ, ಸಹಾಯ ಅರ್ಚಕರಿಗೆ 5 ಸಾವಿರ ಕೊಡಲಾಗುತ್ತಿದೆ. ಪೇಶ್ ಇಮಾಮ್‌ಗಳಿಗೆ 6 ಸಾವಿರ ಮತ್ತು ಮುಯೀಜ್ಜನ್‌ಗೆ 5 ಸಾವಿರ ಮಾಸಿಕ ಗೌರವಧನ ಕೊಡಲಾಗ್ತಿದೆ. ಬೌದ್ಧ ಬಿಕ್ಕುಗಳಿಗೆ ಸರ್ಕಾರ ಮಾಸಿಗ ಗೌರವ ಧನ ಕೊಡಲಿದೆ. ಶೀಘ್ರವೇ ಗೌರವ ಧನ ಕೊಡುತ್ತೇವೆ ಎಂದು ಘೋಷಿಸಿದರು.

Share This Article