ವಾಷಿಂಗ್ಟನ್: ಸಿಡ್ನಿಯ ಬೊಂಡಿ ಬೀಚ್ ಭಯೋತ್ಪಾದಕ ದಾಳಿಯು (Sydney Attack) ಉಗ್ರವಾದ ವಿರುದ್ಧದ ಜಾಗತಿಕ ಆಕ್ರೋಶ ದ್ವಿಗುಣಗೊಳಿಸಿದೆ. ಇಸ್ಲಾಮಿಕ್ ಮೂಲಭೂತವಾದವನ್ನ ಬುಡಸಮೇತ ಕಿತ್ತೆಸೆಯುವಂತೆ, ಜಾಗತಿಕ ಸರ್ಕಾರಗಳನ್ನ ಜನರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್ (Tulsi Gabbard) ದೊಡ್ಡ ಹೇಳಿಕೆ ನೀಡಿದ್ದಾರೆ.
.@POTUS: “Let me take a moment to send the love and prayers [of] our entire nation to the people of Australia… All nations must stand together against the evil forces of radical Islamic terrorism.” pic.twitter.com/PdhVBwgy2p
— Rapid Response 47 (@RapidResponse47) December 17, 2025
ಆಸ್ಟ್ರೇಲಿಯಾದಲ್ಲಿ (Australia) ನಡೆದ ಇಸ್ಲಾಮಿಕ್ ಭಯೋತ್ಪಾದಕರ ಗುಂಡಿನ ದಾಳಿಗೆ ಯಾರೂ ಆಶ್ಚರ್ಯಪಡಬೇಕಾಗಿಲ್ಲ. ಹೆಚ್ಚಿನ ಸಂಖ್ಯೆಯ ಇಸ್ಲಾಮಿಸ್ಟ್‌ಗಳ ಒಳನುಸುಳುವಿಕೆಯೇ ಆಸ್ಟ್ರೇಲಿಯಾದ ಈ ಪರಿಸ್ಥಿತಿಗೆ ಕಾರಣ. ಆಸ್ಟ್ರೇಲಿಯಾ ಮಾತ್ರವಲ್ಲದೇ ಅಮೆರಿಕ ಸೇರಿದಂತೆ ಇಡೀ ಜಗತ್ತನ್ನ ಇಸ್ಲಾಮಿಕರಣಗೊಳಿಸುವುದು ಅವರ ಗುರಿಯಾಗಿದೆ. ಇಸ್ಲಾಮಿಸ್ಟ್‌ಗಳು ಮತ್ತು ಇಸ್ಲಾಮಿಸಂ ಅಮೆರಿಕಕ್ಕೆ ಮಾತ್ರವಲ್ಲದೇ ಇಡೀ ವಿಶ್ವದ ಸ್ವಾತಂತ್ರ್ಯ, ಭದ್ರತೆ, ಸಮೃದ್ಧಿಗೆ ದೊಡ್ಡ ಬೆದರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೊಂಡಿ ಬೀಚ್ ಗುಂಡಿನ ದಾಳಿ ಕೇಸ್ – 27 ವರ್ಷಗಳ ಹಿಂದೆ ಭಾರತ ತೊರೆದಿದ್ದ ಶೂಟರ್ ಅಕ್ರಮ್
ಯುರೋಪ್ ಮತ್ತು ಆಸ್ಟ್ರೇಲಿಯಾಕ್ಕೆ ಇದು ತಡವಾಗಿದೆ. ಅಮೆರಿಕಕ್ಕೂ ಬಹಳ ಹತ್ತಿರದಲ್ಲೇ ಇದೆ. ಅದೃಷ್ಟವಶಾತ್ ಟ್ರಂಪ್ ಅವರು ನಮ್ಮ ಗಡಿಗಳ ಭದ್ರತೆಗೆ ಆದ್ಯತೆ ನೀಡಿದ್ದಾರೆ. ಇದರೊಂದಿಗೆ ಶಂಕಿತ ಭಯೋತ್ಪಾದಕರನ್ನ ಗಡೀಪಾರು ಮಾಡುವುದು ಮತ್ತು ಅಮೆರಿಕನ್ನರನ್ನ ಅಪಾಯಕ್ಕೆ ತಳ್ಳುವ ಸಾಮೂಹಿಕ ವಲಸೆಯನ್ನ ತಪ್ಪಿಸುವುದು ಅಗತ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಅನ್‌ಕ್ಯಾಪ್ ಪ್ಲೇಯರ್ ಮಂಗೇಶ್ ಯಾದವ್‌ಗೆ 5.20 ಕೋಟಿ – ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು?
ಇದೇ ಡಿ.14ರಂದು ಬೊಂಡಿ ಬೀಚ್‌ನಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಯೋತ್ಪಾದಕರಿಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ 16 ಮಂದಿ ಯಹೂದಿಗಳು ಬಲಿಯಾಗಿದ್ದರು. ಇದನ್ನೂ ಓದಿ: ಸದೃಢ ಭಾರತ ನಿರ್ಮಾಣಕ್ಕಾಗಿ ಮಠಗಳು ಯುವಜನತೆಗೆ ಸ್ಫೂರ್ತಿ ತುಂಬಬೇಕು – ದ್ರೌಪದಿ ಮುರ್ಮು


