ಸಂಬಳದಲ್ಲಿ 70% ಇಳಿಕೆ – 7 ಕೋಟಿಗೆ ಆರ್‌ಸಿಬಿಗೆ ವೆಂಕಟೇಶ್‌ ಅಯ್ಯರ್‌ ಮಾರಾಟ

1 Min Read

ಅಬುಧಾಬಿ: ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್‌ ಮತ್ತು ಮಧ್ಯಮ ವೇಗಿ ಬೌಲರ್‌ ವೆಂಕಟೇಶ್‌ ಅಯ್ಯರ್‌ (Venkatesh Iyer) ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) 7 ಕೋಟಿ ರೂ. ನೀಡಿ ಖರೀದಿಸಿದೆ.

ಕಳೆದ ವರ್ಷ ಕೋಲ್ಕತ್ತಾ (KKR) 23.75 ಕೋಟಿ ರೂ. ನೀಡಿ ಅಯ್ಯರ್‌ ಅವರನ್ನು ಖರೀದಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಯ್ಯರ್‌ ಬಿಡ್‌ ಮೌಲ್ಯ 70% ಕಡಿಮೆಯಾಗಿದೆ. ಇದನ್ನೂ ಓದಿ:   ಕ್ಯಾಮರೂನ್‌ ಗ್ರೀನ್‌ 25.20 ಕೋಟಿಗೆ ಸೇಲಾದ್ರೂ ಸಿಗೋದು 18 ಕೋಟಿ!

2021 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿರುವ ಅಯ್ಯರ್‌ ಒಟ್ಟು 62 ಪಂದ್ಯಗಳಿಂದ 137.32 ಸ್ಟ್ರೈಕ್‌ ರೇಟ್‌ನಲ್ಲಿ 1468 ರನ್‌ ಹೊಡೆದಿದ್ದಾರೆ. ಒಂದು ಶತಕ ಮತ್ತು 12 ಅರ್ಧಶತಕ ಬಾರಿಸಿದ್ದಾರೆ.
Share This Article