ಏರ್ಪೋರ್ಟ್ ವಿಚಾರಕ್ಕೆ 3 ಸಚಿವರ ನಡುವೆ ಸದನದಲ್ಲಿ ವಾಗ್ವಾದ

2 Min Read

ಬೆಂಗಳೂರು: ವಿಧಾನ ಪರಿಷತ್ (Legislative Council) ಕಲಾಪದಲ್ಲಿಂದು ಏರ್ಪೋರ್ಟ್ (Airport) ವಿಚಾರಕ್ಕೆ 3 ಜನ ಸಚಿವರ ನಡುವೆ ವಾಗ್ವಾದ ನಡೆಯಿತು.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ತಿಪ್ಪಣ್ಣಪ್ಪ ಕಮಕನೂರು ಪ್ರಶ್ನೆ ಕೇಳಿದ್ರು. ಬೆಂಗಳೂರು-ಕಲುಬುರ್ಗಿ ವಿಮಾನ ಸಂಚಾರ ರದ್ದು ಮಾಡಲಾಗಿದೆ. 700 ಎಕರೆ ಜಾಗದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಲಾಗಿದೆ. ಪ್ರಯಾಣಿಕರು ಇಲ್ಲ ಅಂತ ವಿಮಾನಯಾನ ರದ್ದು ಮಾಡೋದು ಸರಿಯಲ್ಲ. ಮತ್ತೆ ವಿಮಾನಯಾನ ಸೇವೆ ಪುನರ್ ಪ್ರಾರಂಭ ಮಾಡಬೇಕು. ವಿಮಾನಯಾನ ಸೇವೆ ನಮಗೆ ಅವಶ್ಯಕತೆ ಇತ್ತು. ಪುನರ್ ಸೇವೆ ಕೊಡಬೇಕು ಅಂತ ಆಗ್ರಹ ಮಾಡಿದ್ರು.

ಇದಕ್ಕೆ ಸಚಿವ ಎಂ.ಬಿ ಪಾಟೀಲ್ (M.B Patil) ಉತ್ತರ ನೀಡಿ, ಈ ವರ್ಷ ಆಗಸ್ಟ್ 15 ರಿಂದ ವಿಮಾನಯಾನ ಸೇವೆ ಸ್ಟಾರ್ ಲೈನ್ ಏರ್ ಲೈನ್ಸ್ ಸೇವೆ ನಿಲ್ಲಿಸಿದೆ. ಪ್ರಯಾಣಿಕರು ಕಡಿಮೆ ಆದ ಹಿನ್ನಲೆಯಲ್ಲಿ ವಿಮಾನಯಾನ ಸ್ಥಗಿತ ಮಾಡಲಾಗಿದೆ. ಈ ಏರ್ಪೋರ್ಟ್ 100% ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಿದೆ‌. ಉಡಾನ್ ಯೋಜನೆ ಅಡಿ ನಿರ್ಮಾಣ ಮಾಡಲಾಯ್ತು. 3 ವರ್ಷ ಆದ ಮೇಲೆ ಉಡಾನ್ ಯೋಜನೆ ಆದ ಮೇಲೆ ಲಾಭ ಸಿಗೊಲ್ಲ. ಹೀಗಾಗಿ ಉಡಾನ್ ಯೋಜನೆ ಅವಧಿ 7-10 ವರ್ಷಕ್ಕೆ ಮುಂದುವರೆಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಚಿವರಿಗೆ ನಾನು ಮನವಿ ಮಾಡಿದ್ದೇನೆ. ‌ಉಡಾನ್ ಯೋಜನೆ ಅವಧಿ ವಿಸ್ತರಣೆ ಮಾಡದೇ ಹೋದ್ರೆ ದೇಶದ ಅನೇಕ ಏರ್ಪೋರ್ಟ್‌ಗಳು ಮುಚ್ಚುತ್ತವೆ. ಹೀಗಾಗಿ ಕೇಂದ್ರ ಸರ್ಕಾರ ಉಡಾನ್ ಯೋಜನೆ ಅವಧಿ ವಿಸ್ತರಣೆ ಮಾಡಲು ಮನವಿ ಮಾಡ್ತೀವಿ ಎಂದರು. ಇದನ್ನೂ ಓದಿ: 140 ಶಾಸಕರು ನಮ್ಮೊಂದಿಗಿದ್ದಾರೆ, ವಿಪಕ್ಷದವರು ಹುಳಿಹಿಂಡುವ ಅಗತ್ಯವಿಲ್ಲ: ಸಿಎಂ

ಎಂ.ಬಿ ಪಾಟೀಲ್ ಉತ್ತರಕ್ಕೆ ಸಚಿವ ಶಿವಾನಂದ್ ಪಾಟೀಲ್ ವಿರೋಧಿಸಿದರು. ಬೀದರಿನಲ್ಲೂ ವಿಮಾನ ಯಾನ ಆರಂಭ ಆಗ್ತಿದೆ. ಉಡಾನ್ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೀರಾ? ಯಾರಿಗೆ ಮಾತಾಡಿ ವಿಮಾನ ಯಾನ ಆರಂಭಿಸ್ತಾ ಇದ್ದೀರಿ ಎಂದು ಶಿವಾನಂದ ಪಾಟೀಲ್ ಪ್ರಶ್ನಿಸಿದರು. ಎಂ.ಬಿ ಪಾಟಿಲ್ ಉತ್ತರ ಕೊಡುವ ಮೊದಲು ಎದ್ದು ನಿಂತ ಈಶ್ವರ್ ಖಂಡ್ರೆ, ನಾವು ಅಲ್ಲಿ ಕಲ್ಯಾಣ ಕರ್ನಾಟಕ ನಿಧಿ ಅಡಿ ನಿಲ್ದಾಣ ಮಾಡಿದ್ದೇವೆ ಎಂದರು. ಈ ವೇಳೆ ಖಂಡ್ರೆ – ಶಿವಾನಂದ ಪಾಟೀಲ್ ನಡುವೆ ವಾಗ್ವಾದ ನಡೀತು. ವಾಗ್ವಾದವನ್ನ ತಮಾಷೆ ಮಾಡಿದ ವಿಪಕ್ಷಗಳು, ಇದು ಕ್ಯಾಬಿನೆಟ್ ಜಗಳ ಎಂದ ಸಿಟಿ ರವಿ, ಎನ್ ರವಿಕುಮಾರ್ ಕಾಲೆಳೆದರು. ಇಬ್ಬರು ಸಚಿವರ ವಾಗ್ವಾದವನ್ನ ತಣ್ಣಗಾಗಿಸಲು ಹೊರಟ್ಟಿ ಯತ್ನ ಮಾಡಿದ್ರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

Share This Article