ಮೊಟ್ಟೆಯಿಂದ ಕ್ಯಾನ್ಸರ್‌ ಆತಂಕ ಸುದ್ದಿ- ಮೊಟ್ಟೆಗಳ ಪರಿಶೀಲನೆಗೆ ಕ್ರಮ: ದಿನೇಶ್ ಗುಂಡೂರಾವ್

3 Min Read

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಗಳಿಗೆ ಅನುಮತಿ ಇಲ್ಲ: ಆರೋಗ್ಯ ಸಚಿವ

ಬೆಂಗಳೂರು/ಬೆಳಗಾವಿ: ಮೊಟ್ಟೆಯಿಂದ ಕ್ಯಾನ್ಸರ್‌ ಬರುತ್ತೆ ಎಂಬ ಅಘಾತಕಾರಿ ಸುದ್ದಿ ವಿಷಯವಾಗಿ ಮೊಟ್ಟೆಗಳ ಪರಿಶೀಲನೆಗೆ ಕ್ರಮವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತೆ ಎಂಬ ಅತಂಕ ವಿಷಯ ಕುರಿತು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ವಿಷಯ ಪ್ರಸ್ತಾಪ‌ ಮಾಡಿದ್ರು. ಭಾರತ ಮೊಟ್ಟೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಪೌಷ್ಟಿಕಾಹಾರವಾಗಿ ಮೊಟ್ಟೆ ಬಳಕೆ ಮಾಡಲಾಗ್ತಿದೆ‌. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಲಾಗ್ತಿದೆ. ಈಗ ಮೊಟ್ಟೆ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಅಂತ ಎಗೋಸ್ ಕಂಪನಿ ಅಪಪ್ರಚಾರ ಮಾಡ್ತಿದೆ. ಇಂತಹ ಅಪಪ್ರಚಾರ ಮಾಡುವ ಕಂಪನಿಗಳ‌ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹಿಸಿದರು. ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ವದಂತಿ – ಎಚ್ಚೆತ್ತ ಆರೋಗ್ಯ ಇಲಾಖೆ, 200ಕ್ಕೂ ಹೆಚ್ಚು ಕಡೆಯಿಂದ ಸ್ಯಾಂಪಲ್ ಸಂಗ್ರಹ

ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿ, ಮೊಟ್ಟೆ ವಿಷಯ ಚರ್ಚೆ ಆಗ್ತಿದೆ. ಕಳೆದ ವರ್ಷ 124 ಮಾದರಿ ಮೊಟ್ಟೆಗಳನ್ನ ಪರೀಕ್ಷೆಗೆ ಒಳಪಡಿಸಿದ್ದೇವೆ. ಇದರಲ್ಲಿ 123 ಮೊಟ್ಟೆ ಸರಿಯಾಗಿ ಇದೆ ಅಂತ ವರದಿ ಬಂದಿತ್ತು. ಮೊನ್ನೆಯಿಂದ ಬಂದಿರೋ ಮೊಟ್ಟೆ ವಿಷಯದ ಮಾಹಿತಿ ಗೊತ್ತಿಲ್ಲ. ಎಗೋಸ್ ಕಂಪನಿಯ ಮೊಟ್ಟೆ ತಪಾಸಣೆ ‌ಮಾಡ್ತಾ ಇದ್ದೇವೆ. ಆ ಕಂಪನಿ ಮೊಟ್ಟೆ ಜೊತೆಗೆ ಬೇರೆ ಬೇರೆ ಮೊಟ್ಟೆಗಳ ಸ್ಯಾಂಪಲ್ ‌ತಗೊಂಡಿದ್ದೇವೆ‌. ಮೊಟ್ಟೆಗಳ ಪರೀಕ್ಷೆ ಆಗ್ತಿದೆ. 3-4 ದಿನಗಳಲ್ಲಿ ವರದಿ ಬರಲಿದೆ ಎಂದರು. ಮೊಟ್ಟೆ ವಿಷಯದಲ್ಲಿ ಜನರು ಅತಂಕ ಪಡೋದು ಬೇಡ. ಇದರ ತನಿಖೆ ಆಗ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತಾಡೋಕೆ ನಮ್ಮ ಇಲಾಖೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಗಳಿಗೆ ಅನುಮತಿ ಇಲ್ಲ
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು‌ ತೆರೆಯಲು ಅನುಮತಿ ಕೊಡೊಲ್ಲ. ಹೈಕೋರ್ಟ್ ಆದೇಶದ ವಿರುದ್ದ ಮೇಲ್ಮನವಿ ಹೋಗೋದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನ ಪರಿಷತ್ ಶೂನ್ಯ ವೇಳೆ ಕಲಾಪದಲ್ಲಿ ಪ್ರದೀಪ್ ಶೆಟ್ಟರ್ ವಿಷಯ ಪ್ರಸ್ತಾಪ ಮಾಡಿದ್ರು. ಸರ್ಕಾರಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನ ಔಷಧಿ ಕೇಂದ್ರ ಬಂದ್ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಇದರಿಂದ ಬಡವರಿಗೆ ಅನ್ಯಾಯ ಆಗ್ತಿದೆ. ಹೈಕೋರ್ಟ್ ಸರ್ಕಾರದ ನಿರ್ಧಾರ ರದ್ದು ಮಾಡಿದೆ. ಸರ್ಕಾರ ಈಗಲಾದ್ರು ಹೈಕೋರ್ಟ್ ಆದೇಶ ಪಾಲನೆ ಮಾಡಿ ತಮ್ಮ ಆದೇಶ ವಾಪಸ್ ಪಡೆಯಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಪತ್ತೆ ವದಂತಿ – ಎಚ್ಚೆತ್ತ ಆರೋಗ್ಯ ಇಲಾಖೆ, ಮೊಟ್ಟೆ ಟೆಸ್ಟ್‌ಗೆ ಸೂಚನೆ!

ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿ, ನಮ್ಮ ಉದ್ದೇಶ ಜನರಿಗೆ ಅನುಕೂಲ ಮಾಡಲು. ನಮ್ಮದು ರಾಜಕೀಯ ದುರುದ್ದೇಶ ಇಲ್ಲ. ಜನರಿಗೆ ಉಚಿತವಾಗಿ ಔಷಧಿ ಕೊಡೋದು ನಮ್ಮ ಉದ್ದೇಶ. ಇದು ಜನ ವಿರೋಧಿ ಇಲ್ಲ ಎಂದರು.

ನಮ್ಮ ಸರ್ಕಾರಿ ಶಾಪ್‌ನಲ್ಲಿ ಔಷಧಿಗಳ ಪಟ್ಟಿ ಜಾಸ್ತಿ ಮಾಡಿದ್ದೇವೆ. ಜನರಿಕ್ ಔಷಧಿ ನಮಗೆ ಕೊಡಿ ನಾವೇ ಖರೀದಿ ಮಾಡಿ ಉಚಿತವಾಗಿ ಕೊಡ್ತೀವಿ ಅಂತ ಜೆಪಿ ನಡ್ಡಾಗೆ ಪತ್ರ ಬರೆದಿದ್ದೇವೆ. ಜನೌಷಧಿ ಕೇಂದ್ರ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಆವರಣದಲ್ಲಿ ಇರಬಾರದು. ಹೊರಗೆ ಅವರು ಶಾಪ್ ಮಾಡಿಕೊಂಡರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಮಳಿಗೆ ಅವಕಾಶ ಕೊಡೊಲ್ಲ. ಹೈಕೋರ್ಟ್ ಆದೇಶದ ಮೇಲೆ ಮೇಲ್ಮನವಿ ಹೋಗ್ತೀವಿ. ನಮ್ಮ ಉದ್ದೇಶ ಉತ್ತಮವಾಗಿ ಇದೆ. ಹೀಗಾಗಿ, ನಾವು ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಹಾಕ್ತೀವಿ ಎಂದರು.

Share This Article