ಹಾಸನ: ಸೈಕಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ನೀರಿನ ಸಂಪ್‌ಗೆ ಬಿದ್ದು 4 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹಾಸನದ (Hassan) ಅಣಚಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಎಡನ್ ಸ್ವೀವ್ (4) ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಎಡನ್ ಸ್ವೀವ್ ಆಟವಾಡುತ್ತಿದ್ದ. ಈ ವೇಳೆ ಪೋಷಕರು ಮನೆಯೊಳಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮನೆಯಿಂದ ಹೊರ ಬಂದ ಪೋಷಕರು ಮಗುವಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ನೀರಿನ ಸಂಪ್ ಬಳಿ ಮಗುವಿನ ಸೈಕಲ್ ಬಿದ್ದಿದ್ದು ಸಂಪ್ ಪರಿಶೀಲಿಸಿದಾಗ ಶವ ನೀರಿನಲ್ಲಿ ತೇಲುತ್ತಿರುವುದು ಕಾಣಿಸಿದೆ. ಇದನ್ನೂ ಓದಿ: 3 ಬೈಕ್‌ಗಳ ನಡ್ವೆ ಸರಣಿ ಅಪಘಾತ – ಮೂವರು ಯುವಕರ ಕೈ-ಕಾಲು ಮುರಿತ
ಕೂಡಲೇ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಾಸನ | ವಿದ್ಯುತ್ ಶಾಕ್‌ಗೆ ಕಂಬದಿಂದ ಬಿದ್ದ ಕಾರ್ಮಿಕರು – ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

