– ಡಿವಿಲ್ ಸಿನಿಮಾ ರಿಲೀಸ್ ಆದಾಗ ರೆಸ್ಪಾನ್ಸ್ ಹೇಗಿದೆ ಅಂತ ಕೇಳೋಕೆ ದರ್ಶನ್ ಕಾಲ್ ಮಾಡಿದ್ರು
– ದರ್ಶನ್‌ಗೆ ಇರುವಂತಹ ಫ್ಯಾನ್ಸ್ ಸಿಗೋದು ತುಂಬಾ ಕಷ್ಟ ಎಂದ ವಿಜಯಲಕ್ಷ್ಮಿ
ದರ್ಶನ್ (Darshan) ಬದುಕಿನ ಏಳುಬೀಳುಗಳ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಮಾತನಾಡಿದ್ದಾರೆ. 25 ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ವಿಜಯಲಕ್ಷ್ಮಿ (Vijayalakshmi) ಮನಬಿಚ್ಚಿ ಮಾತಾಡಿದ್ದಾರೆ.
ಡೆವಿಲ್ (Devil) ಚಿತ್ರದ ನಟಿ ರಚನಾ ರೈ ಸಂದರ್ಶನ ನಡೆಸಿದರು. ಡೆವಿಲ್ ಶೂಟಿಂಗ್ ಬಳಿಕ ಸರ್ಜರಿ ಮಾಡಿಸಲು ನಿರ್ಧರಿಸಲಾಗಿತ್ತು. ದರ್ಶನ್ ಅವರಿಗೆ ನಿಜವಾಗಿಯೂ ಬೆನ್ನುನೋವು ಇದೆ. ಡಾಕ್ಟರ್ ಸರ್ಜರಿ ಮಾಡೋಣ ಅಂತ ಹೇಳಿದ್ರು. ಆರು ತಿಂಗಳಿಂದ ಒಂದು ವರ್ಷ ಆರೈಕೆ ಬೇಕು ಅಂದ್ರು. ಫೈಟ್, ಡಾನ್ಸ್ ಮಾಡುವ ಹಾಗಿಲ್ಲ. ಡೆವಿಲ್ ಮುಗಿದ ನಂತರ ಸರ್ಜರಿ ಮಾಡಿಸಿಕೊಳ್ಳೋಣ. ವಿದೇಶದಲ್ಲಿ ಸರ್ಜರಿ ಮಾಡಿಸಿಕೊಳ್ಳೋಣ ಅಂತ ಹೇಳಿದ್ದರು. ದುಬೈ ಡಾಕ್ಟರ್ ಜೊತೆ ಮಾತುಕತೆ ಆಗಿತ್ತು. ಡೆವಿಲ್ ಮುಗಿದ ನಂತರ ಸರ್ಜರಿ ಮಾಡಿಸಿಕೊಳ್ಳುವ ಮಾತುಕತೆ ಆಗಿತ್ತು. ಈಗಲೂ ಜೈಲಿನಲ್ಲಿ ದರ್ಶನ್ ಅವರು ಬೆನ್ನುನೋವಿನಲ್ಲಿ ನರಳುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಆರ್ಯನ್ ಖಾನ್ ಬಂದಿದ್ದ, ಶಿಲ್ಪಾ ಶೆಟ್ಟಿ ಒಡೆತನದ ಪಬ್‌ಗಳ ವಿರುದ್ಧ FIR
ಸುಪ್ರೀಂ ಕೋರ್ಟ್ನಲ್ಲಿ ಬೇಲ್ ರದ್ದಾದಾಗ ದರ್ಶನ್ ಮೌನವಾಗಿದ್ದರು. ಯಾರೊಂದಿಗೂ ಮಾತನಾಡದೆ ಒಬ್ಬೊಬ್ಬರೆ ಕುಳಿತುಕೊಳ್ಳುತ್ತಿದ್ರು. ಬೇಲ್ ರದ್ದಾದ ವಿಷಯವನ್ನ ನಾನೇ ಫೋನ್ ಮಾಡಿ ಹೇಳಿದೆ. ಬೇಲ್ ರದ್ದಾಯ್ತು ಅಂದಕೂಡ್ಲೆ ಅವರು ಮೌನವಾದ್ರು. ಆಯಿತು, ಬ್ಯಾಗ್ ರೆಡಿ ಮಾಡು ರ‍್ತೀನಿ ಅಂತ ದರ್ಶನ್ ಹೇಳಿದ್ದರು. ಅಳುತ್ತಾ ಕೂರಬೇಡ. ನೀನು ಹುಷಾರು, ಮಗನನ್ನು ಚೆನ್ನಾಗಿ ನೋಡಿಕೊ ಅಂತ ದರ್ಶನ್ ಹೇಳಿದ್ದರೆಂದು ವಿಜಯಲಕ್ಷ್ಮಿ ಮಾತನಾಡಿದ್ದಾರೆ.
ದರ್ಶನ್ ಅರೆಸ್ಟ್ ಆದಾಗ ಮಗನಿಗೆ ಆ ವಿಚಾರವನ್ನೇ ಹೇಳಿರಲಿಲ್ಲ. ದರ್ಶನ್ ಅರೆಸ್ಟ್ ವಿಚಾರವನ್ನ ನಾನು ಮಗನಿಂದ ಮುಚ್ಟಿಟ್ಟಿದ್ದೆ. ಘಟನೆ ನಡೆದ ನಂತರ ವಿನೀಶ್‌ಗೆ ಅದನ್ನು ಅರಗಿಸಿಕೊಳ್ಳಲು ಕಷ್ಟವಾಯಿತು. ಆ ಸಣ್ಣ ವಯಸ್ಸಿನ ಹುಡುಗನಿಗೆ ಏನು ಅಂತ ಹೇಳಲಿ. ದರ್ಶನ್ ಅರೆಸ್ಟ್ ಆದಾಗ ವಿನೀಶ್ ಕೋಚಿಂಗ್‌ಗೆ ಹೋಗಿದ್ದ. ಅದನ್ನು ಮುಚ್ಚಿಟ್ಟಿದ್ದೆ. ಅವನು ಫೋನ್‌ನಲ್ಲಿ ನೋಡಿ ಅಪ್ಪ ಅರೆಸ್ಟ್ ಆಗಿದ್ದಾರೆ ಅಂತ ವಿನೀಶ್‌ಗೆ ಗೊತ್ತಾಗಿತ್ತು. ಅವನು ಅಳುತ್ತಲೇ ನನ್ನ ಕೇಳಿದ. ಹೇಗೆ ಆತನನ್ನು ಸಮಾಧಾನಿಸಲು. ವಿನೀಶ್‌ಗೆ ಸ್ನೇಹಿತರು ಕೂಡ ದರ್ಶನ್ ಅರೆಸ್ಟ್ ಆದ ಬಗ್ಗೆ ಹೇಳಿದ್ದರು ಎಂದು ತಿಳಿಸಿದ್ದಾರೆ.
ದರ್ಶನ್ ಜೈಲೊಳಗೆ ಇದ್ದರೂ ಅವರು ನಮ್ಮೊಂದಿಗೆ ಇದ್ದಾರೆ ಅಂತ ಅಭಿಮಾನಿಗಳಿಗೆ ಅನಿಸಬೇಕಿತ್ತು. ಆ ಕಾರಣದಿಂದಾಗಿಯೇ ದರ್ಶನ್ ಅವರ ಸೋಷಿಯಲ್ ಮೀಡಿಯಾವನ್ನು ನಾನೇ ಹ್ಯಾಂಡಲ್ ಮಾಡುತ್ತಿದ್ದೇನೆ. ಸಿನಿಮಾ ಕುರಿತಾಗಿ ಪ್ರತಿಯೊಂದನ್ನು ಅಪ್‌ಡೇಟ್ ಮಾಡಬೇಕಿತ್ತು. ಹಾಗಾಗಿ ದರ್ಶನ್ ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡೋಕೆ ಒಪ್ಪಿಕೊಂಡೆ. ಹೊರಗೆ ಏನೆಲ್ಲ ನಡೆಯುತ್ತಿದೆ ಅಂತ ಪ್ರತಿ ವಿಷಯವನ್ನು ನಾನು ದರ್ಶನ್ ಜೊತೆ ಮಾತಾಡಿದ್ದೇನೆ. ವಾರದಲ್ಲಿ ದರ್ಶನ್ ಎರಡು ಬಾರಿ ನನಗೆ ಜೈಲಿನಿಂದ ಫೋನ್ ಮಾಡುತ್ತಾರೆ. ಡೆವಿಲ್ ಸಿನಿಮಾ ಬಿಡುಗಡೆ ಆಗುವ ದಿನ ಮಧ್ಯಾಹ್ನ 12ಕ್ಕೆ ಕಾಲ್ ಮಾಡಿದ್ದರು. ಸಿನಿಮಾ ರೆಸ್ಪಾನ್ಸ್ ಹೇಗಿತ್ತು? ನಿರ್ಮಾಪಕರು ಖುಷಿಯಲ್ಲಿದ್ದಾರಾ? ಅಭಿಮಾನಿಗಳು ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರಾ ಅಂತ ಕೇಳಿದ್ದರು ಎಂದಿದ್ದಾರೆ. ಇದನ್ನೂ ಓದಿ: `ರಕ್ಷಿತಾ ಆರ್ ಕೂಡ ನೀವಲ್ಲ’- ರಕ್ಷಿತಾ ಧ್ರುವಂತ್ ಸಿಕ್ಕಾಪಟ್ಟೆ ಕಿತ್ತಾಟ!
ನನಗೆ ನೋವಾದಾಗ ಮ್ಯಾಕ್ಸಿಮಮ್ ಹತ್ತು ದಿನ ಅಳುತ್ತಲೇ ಇರುತ್ತೇನೆ. ಆಮೇಲೆ ನನಗೆ ನಾನೇ ಸಮಾಧಾನ ಮಾಡಿಕೊಂಡು ಎದ್ದೇಳುತ್ತೇನೆ. ದರ್ಶನ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು. ಇದೀಗ ಅವರ ಫ್ಯಾನ್ಸ್‌ಗೆ ಟಾರ್ಗೆಟ್ ಮಾಡುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ತಪ್ಪಾಗಿ ನಡೆದುಕೊಳ್ಳಲ್ಲ, ನೂಕು ನುಗ್ಗಲು ಇರಲ್ಲ. ನಾನು ಕೂಡ ಜನರ ಮಧ್ಯ ಸಿನಿಮಾ ನೋಡಿದ್ದೇನೆ. ಒಂದೇ ಒಂದು ಕೆಟ್ಟ ಅನುಭವ ನನಗೂ ಆಗಿಲ್ಲ. ಬೇರೆ ಹೆಣ್ಣುಮಕ್ಕಳಿಗೂ ಆಗಿಲ್ಲ. ಹೆಣ್ಣುಮಕ್ಕಳನ್ನು ಹೇಗೆ ನೋಡಬೇಕು ಅಂತ ದರ್ಶನ್ ಫ್ಯಾನ್ಸ್ಗೆ ಗೊತ್ತು. ಸೋಷಿಯಲ್ ಮೀಡಿಯಾದಲ್ಲಿ ಯಾರ ಹೆಸರಲ್ಲೂ ಫೇಕ್ ಅಕೌಂಟ್ ಮಾಡಬಹುದು. ಯಾರ ಹೆಸರಲ್ಲೂ ಬೇಕಾದರೂ ಅಕೌಂಟ್ ಕ್ರಿಯೇಟ್ ಮಾಡಿ ಕೆಟ್ಟ ಮೆಸೇಜ್ ಕಳುಹಿಸಬಹುದು. ಆದರೆ, ಅವರು ದರ್ಶನ್ ಫ್ಯಾನ್ಸ್ ಅಂತ ಹೇಗೆ ಹೇಳ್ತಾರೆ? ದರ್ಶನ್ ಫ್ಯಾನ್ಸ್ ಖಂಡಿತಾ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ದರ್ಶನ್ ಅವರ ಫ್ಯಾನ್ಸ್ ತೋರುವ ಪ್ರೀತಿ ಎಂದಿಗೂ ಮರೆಯಲ್ಲ. ಅಂತಹ ಫ್ಯಾನ್ಸ್ ಸಿಗೋದು ತುಂಬಾ ಕಷ್ಟ ಎಂದು ತಿಳಿಸಿದ್ದಾರೆ.
ಸಿನಿಮಾ ನೋಡದೇ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ದಯವಿಟ್ಟು ಸಿನಿಮಾ ನೋಡದೇ ಕಾಮೆಂಟ್ ಮಾಡಬೇಡಿ. ಒಂದೊಳ್ಳೆ ಸಿನಿಮಾವನ್ನು ಹಾಳು ಮಾಡಬೇಡಿ. ಸಿನಿಮಾ ನೋಡಿಯೂ ಇಷ್ಟ ಆಗದೇ ಇದ್ದರೆ ಮಾತಾಡಿ. ಅದು ಸರಿಯಾದದ್ದು ಅಲ್ಲ. ದರ್ಶನ್ ಅವರಿಗೆ ಕೋಪ ಇದೆ. ಇಲ್ಲ ಅಂತ ಹೇಳಲ್ಲ. ಅವರು ನೇರವಂತಿಕೆ ಇರುವಂಥವರು. ಯಾವಾಗಲೂ ಕೋಪಿಸಿಕೊಳ್ಳುವುದಿಲ್ಲ. ಮನೆಯಲ್ಲಿ ಕಾಮ್ ಆಗಿಯೇ ಇರುತ್ತಾರೆ. ಯಾವುದೋ ಒಂದು ಸ್ಥಳ, ಜನರು ಇದ್ದಾಗ ಅವರಿಗೆ ಕೋಪ ಬರಬಹುದು ಎಂದು ವಿಜಯಲಕ್ಷ್ಮಿ ಮಾತನಾಡಿದ್ದಾರೆ.


