ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ – ಬೆಂಗ್ಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ದೂರು

1 Min Read

ಬೆಂಗಳೂರು: ಸಂಗೀತ ನಿರ್ದೇಶಕ ರಿಕ್ಕಿ ಕೇಜ್ (Ricky Kej) ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಸಂಪ್‌ನ ಮುಚ್ಚಳ ಕದ್ದಿದ್ದು, ಈ ಕುರಿತು ರಿಕ್ಕಿ ಅವರು ಎಕ್ಸ್ ಖಾತೆಯಲ್ಲಿ ಬೆಂಗಳೂರಿಗೆ ಪೊಲೀಸರಿಗೆ (Bengaluru Police) ಟ್ಯಾಗ್ ಮಾಡಿ ದೂರು ನೀಡಿದ್ದಾರೆ.

ಸಂಪ್‌ನ ಮುಚ್ಚಳ ಕದಿಯುತ್ತಿರುವ ಸಿಸಿಟಿವಿ ದೃಶ್ಯಗಳನ್ನು ರಿಕ್ಕಿ ಕೇಜ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಝೊಮ್ಯಾಟೋ ಡೆಲಿವರಿ ಬಾಯ್‌ ಮನೆಯ ಒಳಗೆ ಬಂದು ಕಳ್ಳತನ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಕೋಲ್ಕತ್ತಾದ ಮೆಸ್ಸಿ ಕಾರ್ಯಕ್ರಮದಲ್ಲಿ ದಾಂಧಲೆ – ಚೇರ್‌, ಬಾಟಲ್‌ ಎಸೆದು ಅಕ್ರೋಶ

ಡಿ.11ರಂದು ಸಂಜೆ 6 ಗಂಟೆಗೆ ಇಬ್ಬರು ಯುವಕರು ಬೈಕ್‌ನಲ್ಲಿ ಬಂದಿದ್ದು, ಆ ಪೈಕಿ ಓರ್ವ ಮನೆಯ ಗೇಟ್ ಒಳಬಂದಿದ್ದಾನೆ. ಕೂಡಲೇ ಸಂಪ್‌ನ ಮೇಲಿರುವ ಕಬ್ಬಿಣದ ಮುಚ್ಚಳವನ್ನು ಎತ್ತಿಕೊಂಡು, ಗೇಟ್‌ನ ಹೊರಗೆ ಹೋಗಿ ಬೈಕ್‌ನಲ್ಲಿ ಇಟ್ಟುಕೊಂಡು ಎಸ್ಕೇಪ್‌ ಆಗಿದ್ದಾರೆ. ಈ ವೇಳೆ ಬೈಕ್ ಮೇಲಿಂದ ಬ್ಯಾಗ್‌ವೊಂದು ಬಿದ್ದಿದ್ದು, ಕೆಂಪು ಬಣ್ಣದ ಫುಡ್ ಡೆಲಿವರಿಗೆ ಬಳಸುವಂತಿದೆ. ಈ ಇಬ್ಬರು ಮೊದಲು ಮನೆಯ ಬಳಿ ಬಂದು ಪರಿಶೀಲನೆ ಮಾಡಿ, ಬಳಿಕ ಕಳ್ಳತನಕ್ಕಿಳಿದಿದ್ದಾರೆ.

ಎಕ್ಸ್‌ನಲ್ಲಿ ಘಟನೆಯ ವಿವರ, ಬೈಕ್‌ನ ನಂಬರ್ ಪ್ಲೇಟ್ ಹಾಗೂ ಮನೆಯೊಳಗೆ ಬಂದ ಕಳ್ಳನ ಫೋಟೋದ ಸ್ಕ್ರೀನ್‌ಶಾಟ್‌ ಕೂಡ ಹಂಚಿಕೊಂಡಿದ್ದು, ಈ ಸಂಬಂಧ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ, ದೂರು ದಾಖಲಿಸಿದ್ದಾರೆ.

Share This Article