ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯ (Gudibande Police Station) ಆವರಣದಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷವಾಗಿದೆ.
ಪೊಲೀಸ್ ಠಾಣೆಯ ಆವರಣದಲ್ಲಿ ಚಿರತೆ ಮರಿ (Leopard Cub) ಓಡಾಡಿದ್ದು ಪೊಲೀಸರು ಕಂಡಿದ್ದು ಕೂಡಲೇ ಪೊಲೀಸರು ಜನರನ್ನ ಕಂಡ ಚಿರತೆ ಭಯದಿಂದ ಪೊಲೀಸ್ ಠಾಣೆಯ ಆವರಣದಲ್ಲೇ ಇದ್ದ ಹಳೆಯ ಕಾರಿನಲ್ಲಿ ಹತ್ತಿ ಅವಿತುಕೊಂಡಿದೆ. ಇದನ್ನೂ ಓದಿ: ಅಧಿವೇಶನ ಮುಗಿದ ಬಳಿಕ ಶ್ರಮಕ್ಕೆ ಫಲ: ಮತ್ತೆ ಡಿಕೆಶಿ ಪರ ಇಕ್ಬಾಲ್ ಹುಸೇನ್ ಬ್ಯಾಟಿಂಗ್
ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಹಾಗೂ ಗುಡಿಬಂಡೆ ಪೊಲೀಸರು ಜಂಟಿಯಾಗಿ ಚಿರತೆ ಮರಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಕಾರಿನ ಸೀಟಿನಡಿ ಚಿರತೆ ಮರಿ ಅವಿತು ಕೂತಿದೆ. ಬಲೆ ಹಾಕಿ ಚಿರತೆ ಮರಿ ಸೆರೆಗೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಯತೀಂದ್ರಗೆ ಮಿನಿಮಮ್ ಕಾಮನ್‌ಸೆನ್ಸ್ ಇಲ್ಲ: ಬಾಲಕೃಷ್ಣ ವಾಗ್ದಾಳಿ


