ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ – 1 ಕೋಟಿ ಮೌಲ್ಯದ 60 ಟನ್‌ಗೂ ಅಧಿಕ ಹತ್ತಿ ಭಸ್ಮ

1 Min Read

ಯಾದಗಿರಿ: ವಿದ್ಯುತ್ ಶಾರ್ಟ್ಸರ್ಕ್ಯೂಟ್‌ನಿಂದ ಕಾಟನ್ ಮಿಲ್‌ನಲ್ಲಿ ಬೆಂಕಿ ಹೊತ್ತಿಕೊಂಡು 1 ಕೋಟಿ ರೂ. ಮೌಲ್ಯದ 60 ಟನ್‌ಗೂ ಅಧಿಕ ಕಾಟನ್ ಬೆಂಕಿಗಾಹುತಿಯಾಗಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಶಹಾಪುರ  (Shahapura) ತಾಲೂಕಿನ ಸಾದ್ಯಪುರ ಸಮೀಪದಲ್ಲಿ ನಡೆದಿದೆ.

ಸಾಹೇಲ್‌ಗೆ ಎಂಬುವವರಿಗೆ ಸೇರಿದ್ದ ಸಾದ್ಯಪುರ ಗ್ರಾಮದ ಸಮೀಪದ ಶ್ರೀ ಲಕ್ಷ್ಮಿ ಬಾಲಾಜಿ ಕಾಟನ್ ಮಿಲ್‌ನಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬೆಂಕಿ ಕೆನ್ನಾಲಿಗೆಗೆ ಧಗಧಗನೆ ಕಾಟನ್ ಹೊತ್ತಿ ಉರಿದಿದ್ದು, 1 ಕೋಟಿ ರೂ. ಮೌಲ್ಯದ 60 ಟನ್‌ಗೂ ಅಧಿಕ ಕಾಟನ್ ಬೆಂಕಿಗಾಹುತಿಯಾಗಿದೆ.ಇದನ್ನೂ ಓದಿ: ಕಾರವಾರ ಜೈಲಲ್ಲಿ ಕೈದಿಗಳಿಂದ ಮತ್ತೆ ದಾಂಧಲೆ; ಜೈಲಲ್ಲಿದ್ದ ಟಿ.ವಿ ಸೇರಿ ಹಲವು ವಸ್ತುಗಳ ಧ್ವಂಸ

ಕಾಟನ್ ಮಿಲ್‌ನಲ್ಲಿ ಕೆಲ ಯಂತ್ರಗಳು ಸುಟ್ಟು ಹೋಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಭೇಟಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Share This Article