5 ಲಕ್ಷ ಮೌಲ್ಯದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ

1 Min Read

ಬಳ್ಳಾರಿ: ಆಕಸ್ಮಿಕ ಬೆಂಕಿ (Fire) ತಗುಲಿ ಲಕ್ಷಾಂತರ ಮೌಲ್ಯದ ಭತ್ತದ ಹುಲ್ಲಿನ ಬಣವೆ ಸುಟ್ಟು ಕರಕಲಾಗಿರುವ ಘಟನೆ ಬಳ್ಳಾರಿ (Ballari) ಜಿಲ್ಲೆ ಕುರುಗೋಡ ತಾಲೂಕಿನ ಓರ್ವಾಯಿ ಗ್ರಾಮದಲ್ಲಿ ನಡೆದಿದೆ.

ರೈತ ದೊಡ್ಡಬಸಪ್ಪ ಎನ್ನುವವರಿಗೆ ಸೇರಿದ ಭತ್ತದ ಬಣವೆ ಬೆಂಕಿಗಾಹುತಿಯಾಗಿದೆ. ಬೇಸಿಗೆಯಲ್ಲಿ ದನಕರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಬಾರದು ಎಂದು ದೊಡ್ಡಬಸಪ್ಪ 5 ಲಕ್ಷ ಮೌಲ್ಯದ ಹದಿನೈದು ಎಕರೆ ಭತ್ತದ ಹುಲ್ಲು ಸಂಗ್ರಹಿಸಿಟ್ಟಿದ್ದರು. ಇದನ್ನೂ ಓದಿ:  ‘ಇದನ್ನ ಹಾಕೊಳ್ಳೋದಕ್ಕಿಂತ ಶೋ ಬಿಡೋದೇ ಲೇಸು’: ಧ್ರುವಂತ್

ಆಕಸ್ಮಿಕ ಬೆಂಕಿಯಿಂದಾಗಿ ಇದೀಗ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಹಾಳಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕುರುಗೋಡ ಪೋಲಿಸ್‌ ಠಾಣೆ ಪ್ರಕರಣ ದಾಖಲಾಗಿದೆ.

Share This Article