‘ಇದನ್ನ ಹಾಕೊಳ್ಳೋದಕ್ಕಿಂತ ಶೋ ಬಿಡೋದೇ ಲೇಸು’: ಧ್ರುವಂತ್

1 Min Read

ವಾರಪೂರ್ತಿ ಬಿಗ್‌ ಬಾಸ್ (Bigg Boss) ಕಾರ್ಯಕ್ರಮದಲ್ಲಿ ಸ್ಪರ್ಧಿ ಧ್ರುವಂತ್ ನಡೆ ಆಶ್ಚರ್ಯಕರವಾಗಿತ್ತು. ಇದೀಗ ಕಿಚ್ಚನ ಪಂಚಾಯ್ತಿಯಲ್ಲಿ ಧ್ರುವಂತ್ (Dhruvanth) ಮಾತು ಒರಟು ಎನಿಸಿದೆ. ಸ್ಪರ್ಧಿಗಳು ಪ್ರಾಣಿಗಳಿಗೆ ಹೋಲಿಸಿದ ಚಿತ್ರವನ್ನ ಕತ್ತಲ್ಲಿ ಹಾಕಿಕೊಳ್ಳೋಕೆ ಒಲ್ಲದ ಧ್ರುವಂತ್ ‘ಇದನ್ನು ನಾನು ಹಾಕಿಕೊಳ್ಳೋದಕ್ಕಿಂತ ಶೋ ಬಿಟ್ಟು ಹೋಗುವುದೇ ಲೇಸು’ ಎಂದಿದ್ದಾರೆ.

ಬಿಗ್‌ ಬಾಸ್ ಮನೆಯಲ್ಲಿ ಯಾರ ವರ್ತನೆ ಯಾವ ಪ್ರಾಣಿ-ಪಕ್ಷಿಗೆ ಹೋಲುತ್ತೆ ಎಂಬ ಚಟುವಟಿಕೆಯಲ್ಲಿ ಧ್ರುವಂತ್ ಕಿಚ್ಚನೆದುರು ಒರಟಾಗಿ ನಡೆದುಕೊಂಡಿದ್ದಾರೆ. ಪಾರಿವಾಳ ಹಾಗೂ ಚೇಳಿನ ಚಿತ್ರವನ್ನು ಧ್ರುವಂತ್‌ಗೆ ಸ್ಪರ್ಧಿಗಳು ಕೊಟ್ಟಿದ್ದರು. ಇದನ್ನ ಕತ್ತಲ್ಲಿ ಹಾಕಿಕೊಳ್ಳದೆ ಧ್ರುವಂತ್ ತಮ್ಮ ಕಾಲ ಮೇಲೆ ಇಟ್ಟುಕೊಂಡಿದ್ರು. ಅದನ್ನ ಗಮನಿಸಿದ ಕಿಚ್ಚ ಸುದೀಪ್, ಧ್ರುವಂತ್ ನೀವು ಅದನ್ನ ಹಾಕಿಕೊಳ್ಳಬೇಕು ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಧ್ರುವಂತ್ ಇದನ್ನ ಹಾಕಿಕೊಳ್ಳೋದಕ್ಕಿಂತ ಮನೆಯಿಂದ ಹೊರಟು ಹೋಗುವುದು ಒಳ್ಳೆಯದು ಎಂದಿದ್ದಾರೆ. ಇದನ್ನೂ ಓದಿ: ಕಿಚ್ಚನ ಎದುರೇ ರಜತ್‌, ಚೈತ್ರಾ ಕುಂದಾಪುರ v/s ಗಿಲ್ಲಿ ಜಟಾಪಟಿ!

ಕಳೆದ ಕೆಲ ದಿನಗಳ ಹಿಂದೆ ಧನುಷ್ ಜೊತೆ ಧ್ರುವಂತ್ ಕ್ಯಾತೆ ತೆಗೆದಿದ್ರು. ಗಾಂಚಲಿ ಜಾಸ್ತಿಯಾಗಿದೆ ಎಂಬ ಪದ ಬಳಸಿದ್ದಕ್ಕೆ ಧ್ರುವಂತ್ ಮೇಲೆ ಧನುಷ್ ಕೋಪಗೊಂಡಿದ್ದರು. ಈ ಪದ ಬಳಕೆಗೆ ಕಿಚ್ಚ ಸುದೀಪ್ ಕೂಡ ಆಕ್ರೋಶ ವ್ಯಕ್ತಪಡಿಸಿ, ಕಳೆದ ಶನಿವಾರ ಧ್ರುವಂತ್‌ಗೆ ಬುದ್ಧಿಮಾತು ಹೇಳಿದ್ದರು. ಇವೆಲ್ಲ ವಿಚಾರಗಳಿಂದ ಧ್ರುವಂತ್ ವಿಚಲಿತರಾದಂತಿದೆ. ಹೀಗಾಗಿಯೇ, ಭಾನುವಾರದ ಸಂಚಿಕೆಯಲ್ಲಿ ತಮ್ಮನ್ನ ಚೇಳಿಗೆ ಹೋಲಿಸಿದ್ದಕ್ಕೆ ಧ್ರುವಂತ್ ಬೇಸರವಾಗಿ ಶೋನಿಂದ ಹೊರ ನಡೆಯುವುದಾಗಿ ಹೇಳಿದ್ದಾರೆ.

Share This Article