ಬೆಂಗಳೂರು, ಚೆನೈ ಹೈವೇಯಲ್ಲಿ 4 ಕಾರು, ಲಾರಿ ನಡುವೆ ಸರಣಿ ಅಪಘಾತ – ಐವರಿಗೆ ಗಂಭೀರ ಗಾಯ

0 Min Read

ಆನೇಕಲ್: ಹೊಸೂರು ಸಮೀಪದ ಪೆರಂಡಪಲ್ಲಿಯ ಬೆಂಗಳೂರು – ಚೆನೈ ಹೈವೇಯಲ್ಲಿ (Bengaluru-Chennai Highway) ಲಾರಿ ಹಾಗೂ ನಾಲ್ಕು ಕಾರುಗಳ (Car) ನಡುವೆ ಸರಣಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ (Accident) ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಿಂದ ಸಂಪೂರ್ಣವಾಗಿ ಕಾರುಗಳು ನಜ್ಜುಗುಜ್ಜಾಗಿವೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನೂ ಓದಿ: Bengaluru | ಬೈಕ್‌ಗೆ ಕಂಟೇನರ್ ಡಿಕ್ಕಿ; ತಾಯಿ-ಮಗ ಸಾವು

ಪೊಲೀಸರು ಕ್ರೇನ್ ಮೂಲಕ ಕಾರುಗಳನ್ನ ರಸ್ತೆಯಿಂದ ತೆರವು ಮಾಡಿದ್ದಾರೆ. ಗಾಯಾಳುಗಳನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: Nelamangala | ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಕಾರು

Share This Article