ಸಿಎಂ-ಡಿಸಿಎಂ ʻಪವರ್‌ʼ ಫೈಟ್‌ ನಡುವೆ ಸೋಮವಾರ ಶಿಡ್ಲಘಟ್ಟಕ್ಕೆ ಸಿಎಂ ಟೂರ್‌

1 Min Read

ಚಿಕ್ಕಬಳ್ಳಾಪುರ: ಸಿಎಂ-ಡಿಸಿಎಂ ನಡುವೆ ಪವರ್ ಶೇರಿಂಗ್ ಫೈಟ್ ನಡುವೆ ನಾಳೆ (ನ.24) ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ಪಟ್ಟಣಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ನೀಡಲಿದ್ದಾರೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ರಸ್ತೆ ಮಾರ್ಗವಾಗಿ ಶಿಡ್ಲಘಟ್ಟಕ್ಕೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿಗಳಿಗೆ 10ಕ್ಕೂ ಹೆಚ್ಚು ಸಚಿವರು ಸಾಥ್ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್, ಭೈರತಿ ಸುರೇಶ್, ಜಮೀರ್ ಅಹಮದ್ ಸೇರಿ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ಕುದುರೆ ವ್ಯಾಪಾರ – ಒಬ್ಬೊಬ್ಬರಿಗೆ 50 ಕೋಟಿ, 1 ಫ್ಲಾಟ್‌, ಫಾರ್ಚುನರ್ ಕಾರ್ ಆಫರ್‌ ನಡೀತಿದೆ: ಛಲವಾದಿ ಬಾಂಬ್‌

ಜೆಡಿಎಸ್ ಶಾಸಕ ರವಿಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನೂ ಜಿಲ್ಲಾ ಪೊಲೀಸ್ ಇಲಾಖೆ ಎಸ್ಪಿ ಕುಶಲ್ ಚೌಕ್ಸೆ ನೇತೃತ್ವದಲ್ಲಿ 800 ಮಂದಿ ಪೊಲೀಸರನ್ನ ಸಿಎಂ ಕಾರ್ಯಕ್ರಮದ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಅನಧಿಕೃತ ಚೆಕ್‌ಪೋಸ್ಟ್ ತೆರೆದು ವಸೂಲಿ ಆರೋಪ: ದೇವದುರ್ಗ APMC ಅಧ್ಯಕ್ಷನ ವಿರುದ್ಧ FIR

Share This Article