ಧಾರವಾಡ | ಹೈದರಾಬಾದ್‌ನಲ್ಲಿ 23 ಕೋಟಿ ವಂಚನೆ ಕೇಸ್‌ – ವಂಚಕ ದಂಪತಿ ಪೊಲೀಸರ ಬಲೆಗೆ

2 Min Read

ಧಾರವಾಡ: ಆ ದಂಪತಿ ಹೈದ್ರಾಬಾದ್‌ನಲ್ಲಿ (Hyderabad) ವಂಚನೆ ಮಾಡಿ ಪರಾರಿಯಾಗಿದ್ದರು. ಹೈದ್ರಾಬಾದ್ ಪೊಲೀಸ್ ಠಾಣೆಯೊಂದರ ಕಸ್ಟಡಿಯಲ್ಲಿ ಇದ್ದಾಗಲೇ ಅಲ್ಲಿಂದ ಎಸ್ಕೇಪ್ ಆಗಿದ್ರು. ಕೊನೆಗೂ ಅವರು ಸಿಕ್ಕಿಬಿದ್ದಿದ್ದಾರೆ.

ತೆಲಂಗಾಣದ (Telangana) ಹೈದರಾಬಾದ್‌ನಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ ವಂಚನೆ ಮಾಡಿ ಪೊಲೀಸ್ ಕಸ್ಟಡಿಯಿಂದಲೇ ತಪ್ಪಿಸಿಕೊಂಡು ಬಂದಿದ್ದ ಹೈದರಾಬಾದ್ ಮೂಲದ ವಂಚಕ ದಂಪತಿಯನ್ನ ಬಂಧಿಸುವಲ್ಲಿ ಧಾರವಾಡ ಪೊಲೀಸರು (Dharwad Police) ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ | ಶಾಲೆಯ ಬಳಿಯೇ ಅಪಾರ ಪ್ರಮಾಣದ ಸ್ಫೋಟಕ ಪತ್ತೆ

ಸದ್ಯ ಈ ದಂಪತಿಯನ್ನ ಹೈದರಾಬಾದ್ ಪೊಲೀಸರಿಗೆ ಒಪ್ಪಿಸಲಾಗಿದೆ. ಇವರು ಹುಬ್ಬಳ್ಳಿ, ಧಾರವಾಡ ಬೈಪಾಸ್ ಮೂಲಕ ರಾಮದುರ್ಗದತ್ತ ಹೊರಟಿದ್ದರು. ಈ ವೇಳೆ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತೀಶ್, ಶಿಲ್ಪಾ ಬಂಧಿತ ವಂಚಕ ದಂಪತಿ. ಇವರು ಹೈದ್ರಾಬಾದ್‌ನಲ್ಲಿ ಹಲವರಿಗೆ ವಂಚನೆ ಮಾಡಿ ಪರಾರಿಯಾಗಿದ್ದರು. ಹೈದ್ರಾಬಾದ್ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಹಲವು ಪ್ರಕರಣ ಕೂಡಾ ದಾಖಲಾಗಿವೆ. ಆದ್ಯಾಗ್ಯೂ ಇವರು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದರು.

ಮಾಜಿ ಕೇಂದ್ರ ಸಚಿವ ಪಿ.ಶಿವಕುಮಾರ್ ಅವರ ಮಗನಾದ ಪಿ. ವಿನಯಕುಮಾರ್ ಅವರಿಗೆನೇ ಈ ಇಬ್ಬರು ದಂಪತಿ ವಂಚನೆ ಮಾಡಿದ್ದರು. ಈ ಹಿನ್ನೆಲೆ ಪಿ.ವಿನಯಕುಮಾರ್ ಕಳೆದ ಅಕ್ಟೋಬರ್ 18ರಂದೇ ಹೈದ್ರಾಬಾದ್ ಸೆಂಟ್ರಲ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಹೈದರಾಬಾದ್ ಪೊಲೀಸರಿಂದ ನಮಗೆ ಮಾಹಿತಿ ಬಂದ ನಂತರ ತಕ್ಷಣ ಅಲರ್ಟ್ ಆಗಿ ನಮ್ಮ ಆಫೀಸರ್ಸ್ ಮುಖಾಂತರ ಚೆಕ್ ಪೋಸ್ಸ್‌ಗಳು ಹಾಕಿ ಪ್ರತಿ ವಾಹನವನ್ನೂ ತಪಾಸಣೆ ನಡೆಸಿದಾಗ ಈ ದಂಪತಿ ಸೆರೆ ಸಿಕ್ಕಿದ್ದಾರೆ. ನಂತರ ಅವರು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ ನಂತರ ಹೈದರಾಬಾದ್ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಧಾರವಾಡ ಎಸ್‌ಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾಲ್‌ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್‌ – 12 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಈ ದಂಪತಿ ಜೊತೆ ಇನ್ನು ಮೂರು ಜನ ಕೂಡಾ ಇದ್ದರು. ಅವರನ್ನೂ ಧಾರವಾಡ ಜಿಲ್ಲಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ಧಾರವಾಡ ಪೊಲೀಸರು ಈ ತಂಡ ಬಂಧಿಸದೇ ಇದ್ದಲ್ಲಿ, ಇವರು ಬೇರೆ ರಾಜ್ಯಕ್ಕೆ ಹೋಗಿ ತಲೆ ಕರೆಸಿಕೊಳ್ಳುವ ಸಾದ್ಯತೆ ಇತ್ತು. ಆದರೆ ಧಾರವಾಡ ಪೊಲೀಸರು ವಂಚಕರ ಮೊಬೈಲ್ ಟ್ರೇಸ್‌ ಮಾಡುವ ಮೂಲಕ ಅವರ ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಇದನ್ನೂ ಓದಿ: Tejas Crash | ಕೊನೆ ಕ್ಷಣದಲ್ಲಿ ಎಜೆಕ್ಟ್‌ ಆಗಲು ಯತ್ನಿಸಿದ್ದ ಪೈಲಟ್‌

Share This Article