ಬೆಂಗಳೂರು: ಕಸ ಗುಡಿಸುವ ಯಂತ್ರದಲ್ಲಿ ಭಾರಿ ಅಕ್ರಮದ ಬಗ್ಗೆ ಚರ್ಚೆ ಜೋರಾಗಿದೆ. 44 ಯಂತ್ರಗಳನ್ನು 613 ಕೋಟಿ ರೂ.ಗೆ ಬಾಡಿಗೆ ಪಡೆಯುವ ಸರ್ಕಾರದ ನಿರ್ಣಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
44 ಕಸ ಗುಡಿಸುವ ಯಂತ್ರಗಳನ್ನ ಬಾಡಿಗೆಗೆ ಪಡೆಯೋಕೆ 613 ಕೋಟಿ ಪಡೆಯುತ್ತಿರೋದು ಎಷ್ಟು ಸರಿ ಅಂತ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಡಿ 82 ಲಕ್ಷಕ್ಕೆ ಖರೀದಿ ಮಾಡಿ ರಾಜ್ಯ ಸರ್ಕಾರಕ್ಕೆ ಕೊಡುತ್ತಿದೆ. ಇವರು ಬಾಡಿಗೆಗೆ ಪಡೆಯೋಕೆ ಹೋಗ್ತಾ ಇರೋದು ಎಷ್ಟು ಸರಿ. 45 ಗಾಡಿಗೆ 308 ಕೋಟಿಗೆ ಸ್ವಂತಕ್ಕೆ ಖರೀದಿ ಮಾಡಬಹುದು. ಉಳಿದ 300 ಕೋಟಿ ಲೂಟಿ ಆಗ್ತಿದೆ. ಹೋರಾಟ ಮಾಡ್ತೇವೆ ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸಂಪುಟದಲ್ಲಿ ನಿರ್ಣಯ ಆಗಿರುವ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಸ್ವಂತವಾಗಿ ಖರೀದಿ ಮಾಡಬಹುದಾದ ಕಸ ಗುಡಿಸುವ ಯಂತ್ರಗಳನ್ನ ಬಾಡಿಗೆಗೆ ಪಡೆಯುವ ನಿರ್ಣಯ ಅಕ್ರಮ, ಭ್ರಷ್ಟಾಚಾರ, ಆರ್ಥಿಕ ಅವ್ಯವಹಾರ ಆಗಿ ಹಣೆಪಟ್ಟಿ ಪಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಇದನ್ನ ಅಸ್ತçವಾಗಿ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಯೋಗ ಮಾಡ್ತಿದೆ.
ಸಂಸದ ಪಿಸಿ ಮೋಹನ್, ಜಿಬಿಎನಲ್ಲಿ ಭಾರೀ ಆರ್ಥಿಕ ಹಗರಣ ಆಗ್ತಿದೆ. ಕಸ ಗುಡಿಸೋದ್ರಲ್ಲಿ, ಡಾಂಬರೀಕರಣ ಮಾಡೋದ್ರಲ್ಲಿ ಅಕ್ರಮ ಆಗ್ತಿದೆ. ಗುಂಡಿ ಮುಚ್ಚಲ್ಲ, ರಸ್ತೆ ಮಾಡಲ್ಲ ಹೀಗಿರುವಾಗ ಅನುದಾನದ ಮೇಲೆ ಅನುದಾನ ಬಿಡುಗಡೆ ಮಾಡ್ತಿದ್ದಾರೆ.. ದುಡ್ಡು ಎಲ್ಲಿ ಹೋಗ್ತಿದೆ. ಈ ಬಗ್ಗೆ ನಾವು ಹೋರಾಡ ಮಾಡ್ತೀವಿ ಅಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇಷ್ಟೆಲ್ಲ ವಿರೋಧದ ಮಧ್ಯೆ ಜಿಬಿಎ ಯಂತ್ರ ಬಾಡಿಗೆಗೆ ಪಡೆಯೋಕೆ ಟೆಂಡರ್ಗೆ ಮುಂದಾಗಿದೆ.

