ಹಸೆಮಣೆ ಏರಲು ಸಜ್ಜಾದ ಸ್ಮೃತಿ ಮಂದಾನ – ಹಳದಿ ಶಾಸ್ತ್ರದಲ್ಲಿ ಭರ್ಜರಿ ಡಾನ್ಸ್‌, ಸಾಥ್‌ ಕೊಟ್ಟ ಟೀಂ ಇಂಡಿಯಾ ಸ್ಟಾರ್ಸ್‌!

2 Min Read

– ಕ್ರೀಡಾಂಗಣದ ಮಧ್ಯೆ ಸ್ಮೃತಿಗೆ ಪ್ರಪೋಸ್ ಮಾಡಿದ ಪಲಾಶ್ ಮುಚ್ಛಲ್; ವಿಡಿಯೋ ವೈರಲ್

ಮುಂಬೈ: ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ (Smriti Mandhana) ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಛಿಲ್ (Palash Muchhal) ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಅವರ ವಿವಾಹ ಸಿದ್ಧತೆಗಳು ಆರಂಭವಾಗಿದೆ. ಅಳದಿ ಶಾಸ್ತ್ರ ಕೂಡ ಮುಕ್ತಾಯವಾಗಿದೆ. ನವೆಂಬರ್ 23ರಂದು ವಿವಾಹ ಸಮಾರಂಭ ನಡೆಯಲಿದ್ದು ಅಂತಿಮ ಹಂತದ ತಯಾರಿಗಳು ಭರದಿಂದ ನಡೆಯುತ್ತಿವೆ.

ಇದೆಲ್ಲದರ ಮಧ್ಯೆ ಸ್ಮೃತಿ ಮಂದಾನಗೆ ಪಲಾಶ್ ಅವರು ಪ್ರಪೋಸ್ ಮಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ. ಈ ಜೋಡಿ 2019ರಿಂದಲೇ ಪ್ರೇಮಪಾಶದಲ್ಲಿತ್ತು ಅನ್ನೋದು ಗಮನಾರ್ಹ.

ಪ್ರಪೋಸ್ ಮಾಡುವುದರಲ್ಲಿ ವಿಶೇಷ ಏನಿದೆ ಅಂತ ಕೇಳಬೇಡಿ. ಯಾಕೆಂದ್ರೆ ಅವರು ತಮ್ಮ ಪ್ರೇಮ ನಿವೇದನೆ ಮಾಡಿರುವುದು ಭಾರತ ಮಹಿಳಾ ತಂಡ ಮೊನ್ನೆ ಮೊನ್ನೆಯಷ್ಟೇ ವಿಶ್ವಕಪ್ ಫೈನಲ್ ಪಂದ್ಯ ಗೆದ್ದ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಮದುವೆಗೂ ಮುನ್ನ, ಪಲಾಶ್ ಮುಚ್ಛಿಲ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Palaash Muchhal (@palash_muchhal)

ವಿಡಿಯೋನಲ್ಲಿ ಏನಿದೆ?
ಪಲಾಶ್ ಮುಚ್ಛಿಲ್ ಅವರು ಸ್ಮೃತಿ ಮಂದಾನ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಡಿವೈ ಪಾಟೀಲ್ ಕ್ರೀಡಾಂಗಣದೊಳಗೆ ಕರೆ ತರುವುದರೊಂದಿಗೆ ಈ ವೀಡಿಯೊ ಪ್ರಾರಂಭವಾಗುತ್ತದೆ. ಪಲಾಶ್ ಅವರು ಸೂಟ್ ತೊಟ್ಟಿದ್ದರೆ ಸ್ಮೃತಿ ಮಂದಾನ ಅವರು ಕಡು ಕೆಂಪು ಬಣ್ಣದ ಗೌನ್ ತೊಟ್ಟಿದ್ದರು. ಈ ವೇಳ ಅವರ ಹಿಂದೆಯೇ ದೊಡ್ಡದಾದ ಹೂಗುಚ್ಛ ಹಿಡಿದ ವ್ಯಕ್ತಿ ಬರುತ್ತಿರುತ್ತಾನೆ.

 

View this post on Instagram

 

A post shared by Jemismriti (@jemismriti1805)

ಮೈದಾನದ ಮಧ್ಯ ಭಾಗಕ್ಕೆ ಬಂದಾಗ ಸ್ಮೃತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗುತ್ತದೆ. ತಕ್ಷಣವೇ ಪಲಾಶ್ ಮಂಡಿಯೂರಿ ಗುಲಾಬಿಗಳ ಪುಷ್ಪಗುಚ್ಛ ಮತ್ತು ವಜ್ರದ ಉಂಗುರದೊಂದಿಗೆ ಸ್ಮೃತಿಯ ಮುಂದೆ ಹಿಡಿದು ಅವರಿಗೆ ಪ್ರಪೋಸ್ ಮಾಡುತ್ತಾರೆ. ಈ ವೇಳೆ ಆಶ್ಚರ್ಯಚಕಿತರಾದ ಸ್ಮೃತಿ ಸಂತೋಷದಿಂದ ಕಣ್ಣೀರು ಸುರಿಸುತ್ತಾರೆ. ಬಳಿಕ ಖುಷಿಯಿಂದ ತಬ್ಬಿಕೊಳ್ಳುತ್ತಾರೆ. ಈ ವೇಳೆ ಅವರ ಬಂಧುಮಿತ್ರರು ಮೈದಾನಕ್ಕೆ ಆಗಮಿಸಿ ಶುಭಾಶಯಗಳನ್ನು ತಿಳಿಸುತ್ತಾರೆ. ಇಬ್ಬರೂ ತಮ್ಮ ಎಂಗೇಜ್ ಮೆಂಟ್ ರಿಂಗ್ ಅನ್ನು ಪ್ರದರ್ಶಿಸುವುದರೊಂದಿಗೆ ಈ ವಿಡಿಯೋ ಕೊನೆಗೊಳ್ಳುತ್ತದೆ.

Share This Article