– ಈ ದೇವಾಲಯ ಮುಂದಿನ ಪೀಳಿಗೆಗೆ ಉಳಿಯಬೇಕು ಎಂದ ಉಪಸಭಾಪತಿ
ಹಾಸನ: ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಹಾಸನ ಜಿಲ್ಲೆ, ಬೇಲೂರು ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀ ಚನ್ನಕೇಶವ ದೇವಾಲಯಕ್ಕೆ (Chennakeshava Temple) ವಿಧಾನಸಭೆ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ (Rudrappa Lamani) ಇಂದು ಭೇಟಿ ನೀಡಿದರು.
ದೇವಾಲಯದ ಆಡಳಿತ ಮಂಡಳಿ ಮಂಗಳವಾದ್ಯಗಳೊಂದಿಗೆ ರುದ್ರಪ್ಪ ಲಮಾಣಿಯವರಿಗೆ ಸ್ವಾಗತ ಕೋರಿದರು. ನಂತರ ಶ್ರೀ ಚನ್ನಕೇಶವಸ್ವಾಮಿಗೆ ಲಮಾಣಿ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: Explainer | 24 ವರ್ಷಗಳ ಇತಿಹಾಸದಲ್ಲಿ 2ನೇ ದುರಂತ – ಒಂದು ʻತೇಜಸ್ʼಗೆ ತಗುಲುವ ವೆಚ್ಚ ಎಷ್ಟು?
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಜರಾಯಿ ಮಂತ್ರಿ ಆಗಿದ್ದ ಸಂದರ್ಭದಲ್ಲೂ ಇಲ್ಲಿಗೆ ಭೇಟಿ ನೀಡಿದ್ದೆ. ಈ ದೇವಾಲಯ ಮುಂದಿನ ಪೀಳಿಗೆಗೆ ಉಳಿಯಬೇಕು. ಹೊಸತನ ತರಲು ಹೋಗಬಾರದು. ರಾಜ್ಯ ಸರ್ಕಾರ ಇದರ ನಿರ್ವಹಣೆ ಮಾಡುತ್ತಿದೆ ಅಷ್ಟೇ. ಇದರ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದರು. ಇದನ್ನೂ ಓದಿ: ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಅಶೋಕ್ ಪ್ರಶ್ನೆ
ಪುರಾತತ್ವ ಇಲಾಖೆ ದೇವಾಲಯ ಈಗ ಹೇಗಿದೆ ಹಾಗೆಯೇ ಉಳಿಸಬೇಕು, ಹೊಸತನ ತರಬಾರದು. ಈಗಿರುವ ಹೊಯ್ಸಳರ ಕಾಲದ ಅಮರಶಿಲ್ಪಿ ಜಕಣಾಚಾರಿ ಕೆತ್ತಿರುವ ಶಿಲ್ಪಕಲೆಗಳನ್ನು ಮುಂದಿನ ಪೀಳಿಗೆಗೆ ನೆನಪಾಗಿ ಉಳಿಸಬೇಕು. ನಾನು ಚಿಕ್ಕಮಗಳೂರಿಗೆ ಬಂದಿದ್ದೆ. ಹಾಗಾಗಿ ಬೇಲೂರು ಶ್ರೀ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ರಸ್ತೆಗುಂಡಿ, ಕಸದ ಸಮಸ್ಯೆ ಬಗ್ಗೆ ಬಿಜೆಪಿ 2ನೇ ಹಂತದ ಅಭಿಯಾನ – ರಸ್ತೆಗುಂಡಿ ಮುಂದೆ ಡೇಂಜರ್ ಚಿತ್ರ ಬಿಡಿಸಿದ ಅಶೋಕ್

