ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಅಶೋಕ್ ಪ್ರಶ್ನೆ

1 Min Read

ಬೆಂಗಳೂರು: ಇದು ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ ಅಥವಾ ಕಸದ ಬೆಂಗಳೂರೇ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಅಧಿಕಾರ ಹಂಚಿಕೆಯಲ್ಲಿದ್ದಾರೆ. ಹಳ್ಳ ಗುಂಡಿಗಳ ಕಡೆ ಗಮನ ಕೊಡುತ್ತಿಲ್ಲ, ಇದು ದುರಹಂಕಾರದ ಪರಮಾವಧಿ ಎಂದು ಟೀಕಿಸಿದರು. ಇಡೀ ಕರ್ನಾಟಕದಲ್ಲಿ ಹಳ್ಳ ಬಿದ್ದ ರಸ್ತೆಗಳು, ಕಸದ ರಾಶಿ, ಅಭಿವೃದ್ಧಿ ಶೂನ್ಯ, ಲೂಟಿ- ಇಷ್ಟೇನಾ ನಿಮ್ಮ ಎರಡೂವರೆ ವರ್ಷದ ಸಾಧನೆ ಎಂದು ಕೇಳಿದರು. ಇದನ್ನೂ ಓದಿ: ರಸ್ತೆಗುಂಡಿ, ಕಸದ ಸಮಸ್ಯೆ ಬಗ್ಗೆ ಬಿಜೆಪಿ 2ನೇ ಹಂತದ ಅಭಿಯಾನ – ರಸ್ತೆಗುಂಡಿ ಮುಂದೆ ಡೇಂಜರ್ ಚಿತ್ರ ಬಿಡಿಸಿದ ಅಶೋಕ್

ಮಾನ ಮರ್ಯಾದೆ ಇದ್ದರೆ ಗುಂಡಿ ಮುಚ್ಚಬೇಕು. ರಸ್ತೆ ಡಾಂಬರೀಕರಣ ಮಾಡಿ ಎಂದು ಒತ್ತಾಯಿಸಿದರು. ಮಾತೆತ್ತಿದರೆ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಆ ಹಣ ಎಲ್ಲಿ ಹೋಗಿದೆ? ಕಳೆದ 4 ತಿಂಗಳಿನಿಂದ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತೀರಲ್ಲವೇ?. ಇದು ಆಸ್ಪತ್ರೆ ರಸ್ತೆ. ಇಲ್ಲಿ ಪ್ರತಿಭಟನೆ, ಪರಿಶೀಲನೆಗೆ ಬಂದಿದ್ದೇವೆ. ಈ ರಸ್ತೆಯಲ್ಲಿ ಹೋದರೆ ತನ್ನಿಂತಾನೇ ಹೆರಿಗೆ ಆಗುತ್ತದೆ ಎಂದು ವ್ಯಂಗ್ಯವಾಗಿ ತಿಳಿಸಿದರು. ಒಂದು ಕಿಮೀ ರಸ್ತೆಯಲ್ಲಿ 400 ಹಳ್ಳ ಬಿದ್ದಿದೆ ಎಂದು ಗಮನ ಸೆಳೆದರು. ಇದನ್ನೂ ಓದಿ: ಅವರಾಗಿ ಕರೆದ್ರೆ ಮಾತ್ರ ಹೋಗ್ತೀವಿ: ಹೈಕಮಾಂಡ್‌ ಭೇಟಿಯಾಗದೇ ಇರಲು ಡಿಕೆ ಬ್ರದರ್ಸ್‌ ನಿರ್ಧಾರ

Share This Article