ಬೆಂಗಳೂರು: ರಸ್ತೆಗುಂಡಿ, ಕಸದ ಬಗ್ಗೆ ಬಿಜೆಪಿ (BJP) ಎರಡನೇ ಹಂತದ ಅಭಿಯಾನವನ್ನ ಕೈಗೊಂಡಿದೆ. ರಸ್ತೆ ಗುಂಡಿ ಮುಚ್ಚದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಮತ್ತೆ ಅಭಿಯಾನ ನಡೆಸುತ್ತಿದೆ.
ಬೆಂಗಳೂರಿನ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಆರ್.ಅಶೋಕ್ (R Ashok) ನೇತೃತ್ವದಲ್ಲಿ ಬಿಜೆಪಿ ನಾಯಕರು ರಸ್ತೆ ಗುಂಡಿ (Road Pothole) ವಿರುದ್ಧ ವಿಭಿನ್ನವಾಗಿ ಅಭಿಯಾನ ಕೈಗೊಂಡರು. ರಸ್ತೆಗುಂಡಿ ಬಿದ್ದಿರುವ ಜಾಗದಲ್ಲಿ ಡೇಂಜರ್ ಎಂಬ ಚಿತ್ರವನ್ನ ಬಿಡಿಸಿ ಸರ್ಕಾರವನ್ನ ಎಚ್ಚರಿಸುವಂತಹ ಕೆಲಸ ಮಾಡಿದ್ದಾರೆ. ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ 400ಕ್ಕೂ ಹೆಚ್ಚು ಗುಂಡಿಗಳು ಇವೆ. ಅದನ್ನ ಮುಚ್ಚುವಂತಹ ಕೆಲಸ ಮಾಡಿಲ್ಲ. ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಟ್ರು ರಸ್ತೆ ಗುಂಡಿ ಮುಚ್ಚಿಲ್ಲ. ನಾವು ಅಭಿಯಾನವನ್ನ ಕೈಗೊಳ್ಳುತ್ತಾ ಇದ್ದೇವೆ, ಹೋರಾಟ ಮಾಡುತ್ತೇವೆ. ರಸ್ತೆ ಗುಂಡಿ ಮುಚ್ಚದೇ ಕೋಟಿ ಕೋಟಿ ದುಡ್ಡನ್ನ ಬಿಡುಗಡೆ ಮಾಡಿದ್ದೀವಿ ಅಂತಾರೆ. ಬಿಡುಗಡೆ ಮಾಡಿರೋ ದುಡ್ಡು ಎಲ್ಲಿ ಹೋಯ್ತು? ಯಾಕೆ ಗುಂಡಿ ಮುಚ್ಚಿಲ್ಲ ಎಂದು ಅಶೋಕ್ ಸರ್ಕಾರವನ್ನ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಟಿಬೇಟಿಯನ್ಗೆ ಮಾರಾಟ ಮಾಡುತ್ತಿದ್ದ 8 ಲಕ್ಷ ಮೌಲ್ಯದ ಚರಸ್ ವಶಕ್ಕೆ; ಆರೋಪಿ ಬಂಧನ
ರಸ್ತೆಗುಂಡಿ ಮುಚ್ಚದೆಯೇ ಸಿಂಗಲ್ ಲೇಯರ್ ಡಾಂಬರೀಕರಣ ಮಾಡುತ್ತೇವೆ ಅಂತಾರೆ. ಮೊದಲು ಗುಂಡಿ ಮುಚ್ಚಿ. ಸಿಂಗಲ್ ಲೇಯರ್ ಡಾಂಬರೀಕರಣದಲ್ಲೂ ದುಡ್ಡು ಹೊಡೆಯೋಕೆ ಪ್ಲ್ಯಾನ್ ಮಾಡಿದ್ದಾರೆ. ಇನ್ನೂ ಟ್ಯಾಕ್ಸ್ ಕಟ್ಟುವವರ ಮನೆ ಮುಂದೆ ಕಸ ಸುರಿಯೋದು ಎಷ್ಟು ಸರಿ ಅಂತಾ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ. ರಸ್ತೆ ಗುಂಡಿ ಕಸದ ಅಭಿಯಾನದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಪಿಸಿ ಮೋಹನ್, ಶಾಸಕ ರಾಮಮೂರ್ತಿ ಭಾಗವಹಿಸಿ ಸರ್ಕಾರವನ್ನ ಎಚ್ಚರಿಸಿದ್ದಾರೆ. ಇದನ್ನೂ ಓದಿ: ವಿಯೆಟ್ನಾಂನಲ್ಲಿ ಭಾರೀ ಮಳೆಗೆ ಪ್ರವಾಹ, ಭೂಕುಸಿತ; 41 ಮಂದಿ ಸಾವು

