ಕಲ್ಲಿದ್ದಲು ಮಾಫಿಯಾ; ಬಂಗಾಳ, ಜಾರ್ಖಂಡ್‌ನ 42 ಸ್ಥಳಗಳಲ್ಲಿ ಇ.ಡಿ ದಾಳಿ – ಭಾರೀ ಪ್ರಮಾಣದ ನಗದು, ಚಿನ್ನ ಪತ್ತೆ

1 Min Read

ಕೋಲ್ಕತ್ತಾ/ರಾಂಚಿ: ಕಲ್ಲಿದ್ದಲು ಮಾಫಿಯಾ (Coal Mafia) ವಿರುದ್ಧ ಹಣ ವರ್ಗಾವಣೆ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಜಾರ್ಖಂಡ್ (Jharkhand ) ಮತ್ತು ಪಶ್ಚಿಮ ಬಂಗಾಳದ (West Bengal) 42 ಸ್ಥಳಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.

ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದ ದಾಳಿಯಲ್ಲಿ ಫೆಡರಲ್ ತನಿಖಾ ಸಂಸ್ಥೆಯ ಸುಮಾರು 100 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ದೊಡ್ಡ ಪ್ರಮಾಣದ ಕಲ್ಲಿದ್ದಲು ಮಾಫಿಯಾ ನಡೆದಿದ್ದು, ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ರಂಗೇರಿಸಿದ ಆ್ಯಶಸ್; ಮೊದಲ ದಿನವೇ 19 ವಿಕೆಟ್‌ ಪತನ – ಆಸೀಸ್‌ಗೆ ʻಮಾಸ್ಟರ್‌ ಸ್ಟೋಕ್ಸ್‌ʼ

ಜಾರ್ಖಂಡ್‌ನಲ್ಲಿ ಇಡಿ 18 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ದುರ್ಗಾಪುರ, ಪುರುಲಿಯಾ, ಹೌರಾ ಮತ್ತು ಕೋಲ್ಕತ್ತಾದಾದ್ಯಂತ 24 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ದಾಳಿ ವೇಳೆ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಕೆಲವು ಡಿಜಿಟಲ್ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಅವರಾಗಿ ಕರೆದ್ರೆ ಮಾತ್ರ ಹೋಗ್ತೀವಿ: ಹೈಕಮಾಂಡ್‌ ಭೇಟಿಯಾಗದೇ ಇರಲು ಡಿಕೆ ಬ್ರದರ್ಸ್‌ ನಿರ್ಧಾರ

ಅನಿಲ್ ಗೋಯಲ್, ಸಂಜಯ್ ಉದ್ಯೋಗ್, ಎಲ್‌ಬಿ ಸಿಂಗ್ ಮತ್ತು ಅಮರ್ ಮಂಡಲ್‌ಗೆ ಸಂಬಂಧಿಸಿದ ಪ್ರಕರಣಗಳೂ ಸೇರಿದ್ದು, ನರೇಂದ್ರ ಖಾರ್ಕಾ, ಅನಿಲ್ ಗೋಯಲ್, ಯುಧಿಷ್ಠೀರ್ ಘೋಷ್, ಕೃಷ್ಣ ಮುರಾರಿ ಕಾಯಲ್ ಮತ್ತು ಇತರರಿಗೆ ಸಂಬಂಧಿಸಿದ ಕಚೇರಿಗಳಲ್ಲೂ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: Miss Universe 2025: ಮೆಕ್ಸಿಕೋದ ಫಾತಿಮಾ ಬಾಷ್‌ಗೆ ವಿಶ್ವ ಸುಂದರಿ ಕಿರೀಟ

Share This Article