ಮಂತ್ರಿ ಮಾಲ್ ರೀ ಓಪನ್ – 30 ಕೋಟಿ ತೆರಿಗೆ ಪಾವತಿಗೆ 2 ವಾರ ಗಡುವು ನೀಡಿದ ಕೋರ್ಟ್

1 Min Read

ಬೆಂಗಳೂರು: ನಗರದ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ (Mantri Mall) ಬೀಗ ಜಡಿದ ಒಂದು ದಿನದ ಬಳಿಕ ಮತ್ತೆ ರೀ ಓಪನ್ ಆಗಿದೆ.

30 ಕೋಟಿ ರೂ. ತೆರಿಗೆ ಬಾಕಿ ಹಿನ್ನೆಲೆ ಬುಧವಾರ (ನ.19) ಜಿಬಿಎ ಅಧಿಕಾರಿಗಳು ಮಂತ್ರಿಮಾಲ್‌ಗೆ ಬೀಗ ಹಾಕಿದ್ದರು. ಅದರ ಬೆನ್ನಲ್ಲೇ ಮಂತ್ರಿಮಾಲ್ ಆಡಳಿತ ಮಂಡಳಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರು ತೆರಿಗೆ ಪಾವತಿಗೆ ಎರಡು ವಾರಗಳ ಗಡುವು ನೀಡಿದೆ. ಇದನ್ನೂ ಓದಿ: 30 ಕೋಟಿ ಆಸ್ತಿ ತೆರಿಗೆ ಬಾಕಿ- ಮಲ್ಲೇಶ್ವರಂನ ಮಂತ್ರಿ ಮಾಲ್‌ಗೆ ಮತ್ತೆ ಬೀಗ

ಮೊದಲು 13 ಕೋಟಿ ರೂ. ಕಟ್ಟುವಂತೆ ಎರಡು ವಾರ ಗಡುವು ನೀಡಿದ್ದು, ಉಳಿದ ಬಾಕಿ ತೆರಿಗೆ ಹಂತ ಹಂತವಾಗಿ ಕಟ್ಟೋದಕ್ಕೆ ಸೂಚನೆ ನೀಡಿದೆ. ಕೋರ್ಟ್ ಸೂಚನೆ ಬೆನ್ನಲ್ಲೇ ಮಂತ್ರಿ ಮಾಲ್ ರೀ ಓಪನ್ ಆಗಿದೆ.

Share This Article