ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – DRI ನಿಂದ 4,000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

1 Min Read

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ, ಆರೋಪಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ (Gold Smuggling Case) ಸಂಬಂಧ DRI ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ.

ಕಳೆದ 6 ತಿಂಗಳಿಂದ ತನಿಖೆ ನಡೆಸುತ್ತಿದ್ದ DRI ಸುಮಾರು 4,000 ಪುಟಗಳಷ್ಟು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: 2ನೇ ಬಾರಿ ತಾಯಿಯಾಗ್ತಿರೋ ಸೋನಂ ಕಪೂರ್‌; ಲೇಡಿಬಾಸ್ ಲುಕ್​​ನಲ್ಲಿ ಪ್ರೆಗ್ನೆನ್ಸಿ ಅನೌನ್ಸ್!

123 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮವಾಗಿ ಸಾಗಾಟ ಮಾಡಿರೋದು ಪ್ರಕರಣದ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈಗಾಗಲೇ 5 ಜನ ಆರೋಪಿಗಳಿಗೂ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ. ಅಲ್ಲದೇ ರನ್ಯಾರಾವ್ ಒಬ್ಬರೇ 104 ಕೋಟಿ ಮೌಲ್ಯದ ಚಿನ್ನ ಅಕ್ರಮ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿ ತನಿಖೆಯಲ್ಲಿ ಅನಾವರಣ ಆಗಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅನಾರೋಗ್ಯದಿಂದ ಗಂಡು ಚಿರತೆ ಸಾವು

ಇನ್ನುಳಿದ ನಾಲ್ವರು ಆರೋಪಿಗಳಿಗೂ ಕೂಡ ಪ್ರತ್ಯೇಕ ಶೋಕಾಸ್ ನೋಟಿಸ್ ನೀಡಲಾಗಿತ್ತು. ಈಗ ಪ್ರಕರಣದ ಕೊನೆಯ ಹಂತಕ್ಕೆ ತಲುಪಿದ್ದು, ಇಂದು DRI ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಮಲತಂದೆ ರಾಮಚಂದ್ರರಾವ್ ಅವರ ಕಾರು ದುರ್ಬಳಕೆ, ರಾಜಕಾರಣಿಗಳ ಹೆಸರು ದುರ್ಬಳಕೆ ಎಲ್ಲಾ ಮಾಹಿತಿಯನ್ನು ಸಮಗ್ರವಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

Share This Article