ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾಯ್ತನದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ಸಖತ್ ವೈರಲ್ ಆಗ್ತಿದೆ. ಅಷ್ಟಕ್ಕೂ ನಿತ್ಯಾ ಮೆನನ್ ಹಂಚಿಕೊಂಡ ಫೋಟೋದ ಅಸಲಿಯತ್ತೇನು ಗೊತ್ತಾ..? ಚಿತ್ರದ ಸನ್ನಿವೇಶದ ಶೂಟಿಂಗ್‌ಗಾಗಿ ನಿತ್ಯಾ ಮೆನನ್ ಪ್ರಾಕ್ಟೀಸ್ ಮಾಡಿದ ತೆರೆಹಿಂದಿನ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇವು ಈಗ ವೈರಲ್ ಆಗ್ತಿವೆ.
View this post on Instagram
ನಿತ್ಯಾ ಮೆನನ್ ಶೂಟಿಂಗ್ ದಿನಗಳಲ್ಲಿ ಕಳೆದ ಕೆಲ ಬ್ಯೂಟಿಫುಲ್ ಮೆಮೊರಿಯನ್ನ ಮೆಲುಕು ಹಾಕಿದ್ದಾರೆ. ವಿಶೇಷ ಅಂದ್ರೆ ತಾಯ್ತನ, ಮಗುವಿನ ಆರೈಯಲ್ಲಿ ತೊಡಗಿದ ತಾಯಿಯ ಪಾತ್ರಕ್ಕಾಗಿ ನಟಿ ಮಾಡಿದ ಪ್ರಾಕ್ಟೀಸ್‌ನ ಆ ಸುಂದರ ಕ್ಷಣಗಳನ್ನ ಈಗ ಹಂಚಿಕೊಂಡಿದ್ದಾರೆ ನಟಿ ನಿತ್ಯ ಮೆನನ್. ಜೊತೆಗೆ ಸಿನಿಮಾ ಸೆಟ್‌ನಲ್ಲಿ ತಾವು ಅನುಭವಿಸಿದ ಸಿಹಿ ನೆನಪುಗಳು, ಒಂದೊಳ್ಳೆ ಟೀಂನ ಮಿಸ್ ಮಾಡಿಕೊಂಡ ರೀತಿಯನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ನಾಗಚೈತನ್ಯ ಹುಟ್ಟುಹಬ್ಬದ ದಿನಕ್ಕೆ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್
ಕನ್ನಡದಲ್ಲಿ ಮೈನಾ, ಕೋಟಿಗೊಬ್ಬ-2 ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿ ನಿತ್ಯಾ ಮೆನನ್ ನಟಿಸಿದ್ದಾರೆ. ಸೌತ್‌ನಲ್ಲಿ ಸೂಪರ್‌ಸ್ಟಾರ್ಸ್ ಜೊತೆ ತೆರೆಹಂಚಿಕೊಂಡಿರುವ ನಟಿ ನಿತ್ಯಾ ಮೆನನ್ ಶೂಟಿಂಗ್ ದಿನಗಳನ್ನ ಮಿಸ್ ಮಾಡಿಕೊಂಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

