ಹಾಸನ | ಮನೆಯಲ್ಲಿ ನಗ್ನವಾಗಿ ಒಂಟಿ ಮಹಿಳೆಯ ಶವ ಪತ್ತೆ – ಕೊಲೆ ಶಂಕೆ

Public TV
1 Min Read

ಹಾಸನ: ಬೇಲೂರು (Beluru) ಪಟ್ಟಣದ ಗಾಣಿಗರ ಬೀದಿಯ ಮನೆಯೊಂದರಲ್ಲಿ ನಗ್ನ ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆಯಾಗಿದೆ.

ಮೃತ ಮಹಿಳೆಯನ್ನು ಚಿಕ್ಕಮಗಳೂರಿನ (Chikkamagaluru) ಮಲ್ಲೇನಹಳ್ಳಿ ಗ್ರಾಮದ ಸ್ಪಂದನ (34) ಎಂದು ಗುರುತಿಸಲಾಗಿದೆ. ಮಹಿಳೆ ಪತಿಯಿಂದ ದೂರಾಗಿ 8 ದಿನಗಳ ಹಿಂದೆ ಬೇಲೂರಿನಲ್ಲಿ ಬಾಡಿಗೆ ಮನೆಗೆ ಬಂದು ನೆಲೆಸಿದ್ದಳು. ಎರಡು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದ್ದನ್ನ ಸ್ಥಳೀಯರು ಗಮನಿಸಿದಾಗ ಈ ಪ್ರಕರಣ ಬಯಲಾಗಿದೆ. ಇದನ್ನೂ ಓದಿ: Delhi Blast | ಅಲ್ ಫಲಾಹ್ ವಿವಿಯ 200 ವೈದ್ಯರು, ಸಿಬ್ಬಂದಿ ಮೇಲೆ ನಿಗಾ

ಮನೆಯ ಬಾಗಿಲು ತೆರೆದಿದ್ದರೂ ಯಾರ ಸುಳಿವು ಇಲ್ಲದೇ ಇದ್ದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಸ್ಪಂದನ ಮೃತದೇಹ ಪತ್ತೆಯಾಗಿದೆ. ಮನೆಯಲ್ಲಿ ಸಂಪೂರ್ಣ ಬೆತ್ತಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.

ಕೊಲೆ (Murder) ಶಂಕೆ ಹಿನ್ನೆಲೆಯಲ್ಲಿ ಬೇಲೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸ್ಥಳದಲ್ಲಿ ಶ್ವಾನದಳ, ಸೋಕೊ ಟೀಂ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: Delhi Blast | ಕಾರಿನಲ್ಲೇ ಕುಳಿತು ಬಾಂಬ್ ರೆಡಿ ಮಾಡಿದ್ದ ಉಗ್ರ ಉಮರ್

Share This Article