ನಾಟಿ ಕೋಳಿ ಬಸ್ಸಾರು ರುಚಿ ನೋಡಿದ್ದೀರಾ?

Public TV
2 Min Read

ಸಸ್ಯಾಹಾರದಲ್ಲಿ ಬಸ್ಸಾರು ರುಚಿ ನೋಡಿಯೂ ಇರುತ್ತೀರ, ಮಾಡಿಯೂ ಇರುತ್ತೀರ, ಆದ್ರೆ ನಾಟಿಕೋಳಿಯಲ್ಲಿ ಬಸ್ಸಾರು ಎಂದಾದ್ರೂ ಮಾಡಿದ್ದೀರಾ? ಹೋಟೆಲ್‌ನಲ್ಲಿ ಬಾಯಿ ಚಪ್ಪರಿಸುವ ನಾನ್‌ವೆಜ್‌ ಪ್ರಿಯರು ಮನೆಯಲ್ಲೇ ಸುಲಭವಾಗಿ ನಾಟಿಕೋಳಿ ಬಸ್ಸಾರು ತಯಾರಿಸಬಹುದಾಗಿದೆ. ಅದಕ್ಕೆ ನೀವು ಮಾಡಬೇಕಿರೋದು ಇಷ್ಟೇ….

ಬೇಕಾಗುವ ಸಾಮಗ್ರಿಗಳು
ಕೋಳಿ – 1 ಕೆಜಿ
ಹೆಸರುಬೇಳೆ – 250 ಗ್ರಾಂ
ಅರಿಶಿನ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಈರುಳ್ಳಿ – 3-4
ಬೆಳ್ಳುಳ್ಳಿ – 2
ಹಸಿಮೆಣಸಿನಕಾಯಿ – 10-15
ಶುಂಠಿ, ದಾಲ್ಟಿನ್ನಿ – 2 ಇಂಚು
ಲವಂಗ – 10-12
ಮೆಣಸು – 1 ಚಮಚ
ದನಿಯಾ – 4 ಚಮಚ
ಗಸಗಸೆ – 50 ಗ್ರಾಂ
ಹುರಿಗಡಲೆ – 1 ಚಮಚ
ತೆಂಗು – ಅರ್ಧ
ಎಣ್ಣೆ, ಕರಿಬೇವು – ಅಗತ್ಯಕ್ಕೆ ತಕ್ಕಷ್ಟು
ಮೆಣಸಿನ ಪುಡಿ – 1 ಚಮಚ

ಮಾಡುವ ವಿಧಾನ ಹೇಗೆ?
* ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿದ ಬಳಿಕ ಬೆಳ್ಳುಳ್ಳಿ ಶುಂಠಿ ಹಾಕಿಕೊಳ್ಳಿ. ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ 3 ರಿಂದ 4ನಿಮಿಷ ಚೆನ್ನಾಗಿ ಹುರಿಯಬೇಕು. ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಸೇರಿಸಿ.
* ಜೊತೆಗೆ ತೆಂಗು ಮತ್ತು ಕೊತ್ತಂಬರಿ ಸೊಪ್ಪನ್ನ ಸೇರಿಸಿ ಹುರಿಯಬೇಕು. ಕೆಲ ನಿಮಿಷಗಳ ಬಳಿಕ ಒಂದು ಕಪ್ ನೀರು ಬೆರೆಸುತ್ತಾ, ಎಲ್ಲಾ ಪದಾರ್ಥಗಳನ್ನು ಸಮರ್ಪಕವಾಗಿ ಮಿಶ್ರಣ ಮಾಡಬೇಕು. ಹದವಾದ ಪೇಸ್ಟ್ ಮಾದರಿಯಲ್ಲಿ ಎಲ್ಲವನ್ನೂ ಮಿಶ್ರಣ ಮಾಡಿಕೊಳ್ಳಬೇಕು.
* ನಂತರ ಒಂದು ಪ್ರತ್ಯೇಕ ಬಾಣಲೆಗೆ ಎಣ್ಣೆ ಹಾಕಿ, ಕರಿಬೇವು, ಈರುಳ್ಳಿ ಮತ್ತು ಟೊಮೆಟೊ ಎಲ್ಲವನ್ನೂ ಒಮ್ಮೆಗೇ ಹಾಕಿ. ಉಪ್ಪು ಅರಿಶಿನ ಪುಡಿ ಹಾಕಿ ಕೆಲ ನಿಮಿಷ ಹುರಿಯಿರಿ.
* ಬಾಣಲೆ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಮುಚ್ಚಳ ಮುಚ್ಚಿದ ನಂತರ ಒಳಗಿರುವ ಹಬೆಯಿಂದಾಗಿ ಟೊಮೆಟೋ ಬೇಗ ಬೇಯುತ್ತದೆ.
* ನಂತರ ಚಿಕನ್ ತೆಗೆದುಕೊಂಡು ಈಗಾಗಲೇ ಸಿದ್ಧವಿರುವ ಪೇಸ್ಟ್‌ನೊಂದಿಗೆ ಬೆರೆಸಿ. ನಂತರ ಕುಕ್ಕರ್‌ಗೆ ಚಿಕನ್ ಬೇಯುವಷ್ಟು ನೀರು ಸೇರಿಸಬೇಕು.
* ಅರ್ಧ ಗಂಟೆ ಕಡಿಮೆ ಉರಿಯಲ್ಲಿ ಚಿಕನ್‌ ಬೇಯಲು ಬಿಡಬೇಕು. ನಿಧಾನವಾಗಿ ಬೇಯಿಸುವುರಿಂದಾಗಿ ಚಿಕನ್ ಕರಿಯ ರುಚಿ ಹೆಚ್ಚಾಗುತ್ತದೆ.
* ಸರಿಯಾಗಿ 30 ನಿಮಿಷ ಕುದಿಯಲು ಬಿಡಬೇಕು. ಹೀಗೆ, ಸಿದ್ಧವಾದ ನಾಳಿ ಕೋಳಿ ಬಸ್ಸಾರು ಸಾರು ರಾಗಿ ಮುದ್ದೆ ಅಥವಾ ಅನ್ನದೊಂದಿಗೆ ಸವಿಯಲು ಸಿದ್ಧ.

Share This Article