– ಟೋಯಿಂಗ್ ಜೊತೆಗೆ ದಂಡ, ಹರಾಜಿಗೆ ಸಿದ್ಧತೆ
ಬೆಂಗಳೂರು: ಬೆಂಗಳೂರಿನ (Bengaluru) ವಾಹನ ಸವಾರರಿಗೆ ಬಿಗ್ ಶಾಕ್ ಕೊಡಲು ಜಿಬಿಎ (GBA) ಮುಂದಾಗಿದೆ. ರಸ್ತೆಗಳಲ್ಲಿ, ಬೀದಿಬದಿಗಳಲ್ಲಿ ತಿಂಗಳಾನುಗಟ್ಟಲೆ ವಾಹನ ನಿಲ್ಲಿಸಿದರೆ ವೆಹಿಕಲ್ ಟೋಯಿಂಗ್ (Towing) ಜೊತೆಗೆ ದಂಡ ಹಾಕಲು ಜಿಬಿಎ ಮುಂದಾಗಿದೆ. ಇದಲ್ಲದೇ ವೆಹಿಕಲ್ ಹರಾಜು ಹಾಕೋದಕ್ಕೂ ಕೂಡ ಜಿಬಿಎ ನಿರ್ಧಾರ ಮಾಡಿದೆ. ಮುಂದಿನ ತಿಂಗಳ ಒಳಗಡೆ ಆರಂಭ ಮಾಡೋದಕ್ಕೆ ಪ್ಲ್ಯಾನ್ ಮಾಡಿದೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ಜಾಸ್ತಿ ಆಗಿದೆ. ರಸ್ತೆಬದಿ, ಬೀದಿಬದಿಗಳಲ್ಲಿ ತಿಂಗಳಾನುಗಟ್ಟಲೇ ವಾಹನಗಳನ್ನ ಪಾರ್ಕ್ ಮಾಡಿರುತ್ತಾರೆ. ಈಗ ಜಿಬಿಎ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ಟೋಯಿಂಗ್ ಮಾಡೋದಕ್ಕೆ ಪ್ಲ್ಯಾನ್ ಮಾಡಿದೆ. ಬೀದಿಬದಿ, ಮನೆ ಮುಂಭಾಗ ಫುಟ್ಪಾತ್ಗಳಲ್ಲಿ ನಿಲ್ಲಿಸಿರೋ ವೆಹಿಕಲ್ಗಳನ್ನು ಟೋಯಿಂಗ್ ಮಾಡಿ ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡ ಹಾಕೋದಷ್ಟೇ ಅಲ್ಲದೇ ಜಿಬಿಎಯಿಂದ ಫುಟ್ಪಾತ್ ಬಳಕೆಗೂ ದಂಡ ಹಾಕುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಿಸಲು ವಿದೇಶ ಟ್ರಿಪ್ ಆಫರ್ ಕೊಟ್ಟ ಶಿಕ್ಷಣ ಇಲಾಖೆ
ಇನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಐದು ಪಾಲಿಕೆಗಳು ಬರಲಿವೆ. ಪ್ರತಿ ಪಾಲಿಕೆಗೂ ಟೋಯಿಂಗ್ ವೆಹಿಕಲ್ಗಳನ್ನ ಖರೀದಿ ಮಾಡಲಿದ್ದಾರಂತೆ. ಟೋಯಿಂಗ್ ವೆಹಿಕಲ್ಗಳನ್ನ ಖರೀದಿ ಮಾಡಿ ಟೆಂಡರನ್ನು ಮುಂದಿನ ತಿಂಗಳ ಒಳಗಡೆ ಮುಕ್ತಾಯ ಮಾಡಿ ಟೋಯಿಂಗ್ ಶುರು ಮಾಡೋ ಮುನ್ಸೂಚನೆಯನ್ನ ಜಿಬಿಎ ಮುಖ್ಯ ಆಯುಕ್ತರು ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ದಾರುಣ ಸಾವಿಗೆ HS ಬ್ಯಾಕ್ಟೀರಿಯಾ ಕಾರಣ: ಪರೀಕ್ಷೆಯಿಂದ ದೃಢ
