ಮೇಕೆದಾಟು ಯೋಜನೆ | ಹೊಸದಾಗಿ ಡಿಪಿಆರ್‌ ಮಾಡಿ ಕೇಂದ್ರಕ್ಕೆ ಅರ್ಜಿ ಸಲ್ಲಿಕೆ: ಡಿಕೆಶಿ

Public TV
2 Min Read

– ರಾಮನಗರದಲ್ಲಿ ಹೆಡ್ ಕ್ವಾಟ್ರಸ್‌ಗೆ ತೀರ್ಮಾನ
– ಅರಣ್ಯ ಮುಳುಗಡೆ ವರದಿ ಕೊಡಲು ತಯಾರಿ

ಬೆಂಗಳೂರು: ಬೆಂಗಳೂರಿಗೆ ಕುಡಿಯುವ ನೀರು ಪೂರೈಸಿರುವ ಉದ್ದೇಶಿತ ಮೇಕೆದಾಟು ಯೋಜನೆ ಆಕ್ಷೇಪಿಸಿದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿತ್ತು. ಈ ಬೆನ್ನಲ್ಲಿ ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಇಂದು ಕಾವೇರಿ ನೀರಾವರಿ ನಿಗಮದ ನಿರ್ದೇಶಕ ಮಂಡಳಿ, ಜಲಸಂಪನ್ಮೂಲ ಅಧಿಕಾರಿಗಳ ಸಭೆ ನಡೆಸಿದರು.

ಸಭೆಯಲ್ಲಿ ಮೇಕೆದಾಟು ಯೋಜನೆ (Mekedatu Project) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಜತೆ ಮಹತ್ವದ ಚರ್ಚೆ ನಡೆಸಲಾಯಿತು. ಇದನ್ನೂ ಓದಿ: ಶಬರಿಮಲೆಗೆ ತೆರಳುತ್ತಿದ್ದ ಮಂಡ್ಯದ ಅಯ್ಯಪ್ಪ ಮಾಲಾಧಾರಿಗಳ ಬಸ್‌ ಪಲ್ಟಿ; 33 ಮಂದಿ ಪಾರು!

ಸಭೆಯ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌, ಕಾವೇರಿ ಬೋರ್ಡ್ (Cauvery Board) ಮಾಡಿದ್ದೇವೆ. ಸುಪ್ರೀಂ ಕೋರ್ಟ್ ವರದಿ ಬಗ್ಗೆ ಚರ್ಚೆಸಿದ್ದೇವೆ. ಹೊಸದಾಗಿ ಡಿಪಿಆರ್ ಮಾಡಿ ಕೇಂದ್ರಕ್ಕೆ ಅರ್ಜಿ ಸಲ್ಲಿಸ್ತೇವೆ. ಮಂಡ್ಯ ಹಾಗೂ ರಾಮನಗರಕ್ಕೆ ಹತ್ತಿರ ಆಗುವಂತೆ ಹೆಡ್‌ಕ್ವಾಟ್ರಸ್ ಮಾಡ್ತೇವೆ ಅಂತ ತಿಳಿಸಿದ್ರು. ಇದನ್ನೂ ಓದಿ: ನ.20, 21ಕ್ಕೆ ಸಿದ್ದರಾಮಯ್ಯ ಚಾಮರಾಜನಗರ, ಮೈಸೂರು ಜಿಲ್ಲಾ ಪ್ರವಾಸ

ಅಲ್ಲದೇ ಎಷ್ಟು ಅರಣ್ಯ (Forest) ಮುಳುಗಡೆ ಆಗುತ್ತದೆ ಅಂತ ವರದಿ ಕೊಡಬೇಕು. ಹಾಗಾಗಿ ಪ್ರತ್ಯೇಕ ಕಚೇರಿ ತೆರೆಯಬೇಕು. ಹಾರೋಬೆಲೆಯಲ್ಲಿ ಈಗಾಗಲೇ ಕಚೇರಿ ಆಗಿದೆ. ಸಿಇ ಲೆವೆಲ್ ನಲ್ಲಿ ಕಚೇರಿ ಮಾಡಬೇಕಿದೆ. ರಾಮನಗರದಲ್ಲಿ ಹೆಡ್ ಕ್ವಾಟ್ರಸ್ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಮಂಡ್ಯ ಹಾಗೂ ರಾಮನಗರಕ್ಕೆ ಹತ್ತಿರ ಆಗುವಂತೆ ಹೆಡ್ ಕ್ವಾಟ್ರಸ್ ಮಾಡಲಿದ್ದೇವೆ. ಅದಕ್ಕೆ ಬೇಕಿರೋ ಸಿಬ್ಬಂದಿ ಹಾಕಲು ಸಹ ತಯಾರು ಮಾಡಿದ್ದೇವೆ. ಹಿಂದೆ ಮಾಡಿದ್ದ ಡಿಪಿಆರ್ ರಿಜೆಕ್ಟ್ ಮಾಡಿರೋದ್ರಿಂದ, ಹೊಸ ಡಿಪಿಆರ್ ಈಗ ಹೊಸದಾಗಿ ಮಾಡಬೇಕು. ಕಾನೂನಿನ ಅಡಿಯಲ್ಲಿ ಎಲ್ಲಿ ಮಂಡಿಸಬೇಕು ಮಂಡಿಸ್ತೇವೆ. ಕಾನೂನು ರೀತಿಯಲ್ಲಿ ಕೇಂದ್ರಕ್ಕೆ ಸಲ್ಲಿಸುತ್ತೇವೆ ಎಂದು ನುಡಿದರು.

ಇನ್ನೂ ಮೇಕೆ ದಾಟು ಯೋಜನೆಗೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸದ್ಯ ಆ ವಿಚಾರ ಬೇಡ. ಮುಂದೆ ಮಾತಾಡ್ತೇನೆ ಅಂತ ಜಾರಿಕೊಂಡರು. ಇದನ್ನೂ ಓದಿ:  ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನವಾಜಾತ ಶಿಶು ಸಾವು – ಸಿಬ್ಬಂದಿಯಿಂದ ನಿರ್ಲಕ್ಷ್ಯ ಆರೋಪ

Share This Article