ಧ್ರುವ ಸರ್ಜಾ (Dhruva Sarja) ಹಾಗೂ ರಚಿತಾ ರಾಮ್ (Rachita Ram) ಎಂಟು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಎಂಟು ವರ್ಷಗಳ ಹಿಂದೆ ʻಭರ್ಜರಿʼ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದ ಧ್ರುವ ಸರ್ಜಾ ಹಾಗೂ ರಚಿತಾ ʻಕ್ರಿಮಿನಲ್ʼ ಸಿನಿಮಾ (Criminal Movie) ಮೂಲಕ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಭರ್ಜರಿ ಸಿನಿಮಾದ ಮುಹೂರ್ತ ನಡೆದ ಸ್ಥಳದಲ್ಲಿ ಕ್ರಿಮಿನಲ್ ಸಿನಿಮಾಗೆ ಮುಹೂರ್ತ ನೆರವೇರಿದೆ. ಡಿಸೆಂಬರ್ ನಿಂದ ಸಿನಿಮಾ ಆರಂಭ ಆಗಲಿದ್ದು, ಸಿನಿಮಾಗೆ ರಾಜ್ ಗುರು ನಿರ್ದೇಶನ ಮಾಡ್ತಿದ್ದಾರೆ. ಹಿರಿಯ ನಟಿ ತಾರಾ ಧ್ರುವ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಆರೋಪಿ ಪ್ರದೋಷ್‌ಗೆ ಮತ್ತೆ 5 ದಿನ ಜಾಮೀನು
ಗೋಲ್ಡ್ ಮೈನ್ ಬ್ಯಾನರ್ ನಲ್ಲಿ ನಿರ್ಮಾಣ ಆಗ್ತಿರುವ ಈ ಸಿನಿಮಾ ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿ ಇರಲಿದ್ದು, ನೈಜ ಘಟನೆಯಾಧಾರಿತ ಸಿನಿಮಾ ಆಗಿರಲಿದೆ. ಹಾವೇರಿ ಭಾಗದಲ್ಲಿ ನಡೆಯುವ ಹೋರಿ ಬೆದರಿಸೋ ಸ್ಪರ್ಧೆಯ ಎಳೆಯ ಜೊತೆಗೆ ಪ್ರೀತಿಯ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗ್ತಿದೆ. ಉತ್ತರ ಕರ್ನಾಟಕದ ಹಳ್ಳಿ ಹೈದನಾಗಿ ಧ್ರುವ ಸರ್ಜಾ ಕಾಣಿಕೊಳ್ಳಲಿದ್ದಾರೆ. ಹೋರಿ ಶಿವನ ಪಾತ್ರವನ್ನ ಧ್ರುವ ನಿಭಾಯಿಸಿದ್ರೆ, ಪಾರ್ವತಿಯಾಗಿ ರಚಿತಾ ಮಿಂಚಲಿದ್ದಾರೆ. 2026ರ ಮಾರ್ಚ್ ತಿಂಗಳೊಳಗಾಗಿ ಸಿನಿಮಾ ಶೂಟಿಂಗ್ ಮುಗಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: 41ನೇ ವಸಂತಕ್ಕೆ ಕಾಲಿಟ್ಟ ಲೇಡಿ ಸೂಪರ್ ಸ್ಟಾರ್

