ರಸ್ತೆಯ ಎರಡು ಬದಿಯಿಂದ ವಾಹನ ಬಂದಿದ್ದಕ್ಕೆ ಹೆದರಿ ಕುಣಿಗೆ ಹಾರಿದ 20 ಕುರಿಗಳು – 16 ಸಾವು

Public TV
1 Min Read

-ನಾಲ್ಕಕ್ಕೆ ಗಂಭೀರ ಗಾಯ

ರಾಯಚೂರು: ರಸ್ತೆಯ ಎರಡು ಬದಿಯಿಂದ ವಾಹನ ಬಂದಿದ್ದಕ್ಕೆ ಹೆದರಿ 20 ಕುರಿಗಳು ಕುಣಿಗೆ ಹಾರಿ, 16 ಸಾವನ್ನಪ್ಪಿದ್ದು, ನಾಲ್ಕರ ಸ್ಥಿತಿ ಗಂಭಿರವಾಗಿರುವ ಘಟನೆ ರಾಯಚೂರು (Raichuru) ತಾಲೂಕಿನ ಪುಚ್ಚಲದಿನ್ನಿ (Puchaldinni) ಗ್ರಾಮದ ಬಳಿ ನಡೆದಿದೆ.

ಪುಚ್ಚಲದಿನ್ನಿ ಗ್ರಾಮದ ಭೀಮಣ್ಣ ಹಾಗೂ ದುಳ್ಳಯ್ಯ ಎಂಬುವವರಿಗೆ ಸೇರಿದ 16 ಕುರಿಗಳು ಸಾವನ್ನಪ್ಪಿದ್ದು, ಸುಮಾರು ಎರಡು ಲಕ್ಷ ರೂ. ಹಾನಿಯಾಗಿದೆ.ಇದನ್ನೂ ಓದಿ: ಕನ್ನೇರಿ ಶ್ರೀಗಳು ಅಭಿವ್ಯಕ್ತಿ ಸ್ವಾತಂತ್ರ‍್ಯ ಬಳಸಿಕೊಂಡು ಮಾತಾಡಿದ್ದಾರೆ, ನಿರ್ಬಂಧ ಹೇರಿರುವುದು ಸೂಕ್ತವಲ್ಲ- ಶ್ರೀಶೈಲ ಜಗದ್ಗುರು

ಕುರಿಗಳನ್ನು ಮೇಯಲು ಕರೆದುಕೊಂಡು ಹೋಗಿದ್ದಾಗ ಜಿಲ್ಲೆಯ ತಲಮಾರಿ ಕಡೆಯಿಂದ ಬಸ್ ಬಂದಿದೆ ಹಾಗೂ ಯರಗೇರಾ ಕಡೆಯಿಂದ ಟಾಟಾ ಏಸ್ ಬಂದಿದೆ. ಇದರಿಂದ ಕುರಿಗಳು ಹೆದರಿ ಕುಣಿಗೆ ಹಾರಿವೆ. ಪರಿಣಾಮ 16 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ಇನ್ನೂ ಗಾಯಗೊಂಡ ನಾಲ್ಕು ಕುರಿಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದು, ಸದ್ಯ ಚೇತರಿಸಿಕೊಳ್ಳುತ್ತಿವೆ. ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: #TwitterDown – ಜಗತ್ತಿನಾದ್ಯಂತ ಬಳಕೆದಾರರಿಗೆ ಸಮಸ್ಯೆ!

Share This Article