– ಅನಿಲ ಸೋರಿಕೆ ತಡೆಯಲು ತಜ್ಞರಿಂದ ತೀವ್ರ ಕಾರ್ಯಾಚರಣೆ
ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ (Gas Tanker Accident) ಪಲ್ಟಿಯಾದ ಪರಿಣಾಮ ಅನಿಲ ಸೋರಿಕೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ (Ankola) ತಾಲೂಕಿನ ರಾಷ್ಟ್ರೀಯ ಹೆದ್ದಾರಿ-52ರ ಕಂಚಿನ ಬಾಗಿಲು ಬಳಿ ನಡೆದಿದೆ.
ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯವಾಗಿದೆ. ಗುಜರಾತ್‌ನಿಂದ ಉಡುಪಿ ಕಡೆಗೆ ಹೋಗುತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಟ್ಯಾಂಕರ್ ನಲ್ಲಿ ಇದ್ದ ಗ್ಯಾಸ್ ಲೀಕ್ ಆಗಿದೆ. ಇದನ್ನೂ ಓದಿ: ಹೈವೆಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಾಲನೆ – ಪ್ರಶ್ನಿಸಿದವರಿಗೆ ಚಾಕು ಇರಿದ ಲೇಡಿ ಟೆಕ್ಕಿ!
ಗಂಭೀರ ಗಾಯಗೊಂಡ ಗ್ಯಾಸ್ ಟ್ಯಾಂಕರ್ ಚಾಲಕ ಅರುಣ್ ಶೇಖ್ (57) ನನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಗ್ಯಾಸ್ ಟ್ಯಾಂಕರ್ ನಲ್ಲಿ ಎಥೆನಾಲ್ ಸೋರಿಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 52ರ (Ankola Highway) ಸಂಚಾರ ಬಂದ್ ಮಾಡಿದ್ದು, ಅಂಕೋಲ ದಿಂದ ಮಾದನಗೇರಿ ಹೆದ್ದಾರಿ ಮೂಲಕ ಮಾರ್ಗ ಬದಲು ಮಾಡಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ NDR ತಂಡ ರವಾನೆ ಮಾಡಲಾಗಿದ್ದು, ಗ್ಯಾಸ್ ಸೋರಿಕೆಯನ್ನ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಘಟನೆ ಸಂಭಂಧ ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: SSLC ಫಲಿತಾಂಶ ಸುಧಾರಣೆಗೆ ಅಧಿಕಾರಿಗಳ ಕಸರತ್ತು: ಶಿಕ್ಷಕರ ಕೊರತೆ ನಡುವೆ ನಾನಾ ಪ್ರಯತ್ನ

