ಬಿಗ್‌ ಬಾಸ್‌ ಮನೆಯಲ್ಲಿ ಅಮಾವಾಸ್ಯೆ ಯಾರು? – ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯ್ತು ಒಂದು ಹೇಳಿಕೆ

Public TV
4 Min Read

ಬಿಗ್‌ ಬಾಸ್‌ (Bigg Boss) ಮನೆಯಲ್ಲಿ ಸ್ಪರ್ಧಿ ಅಶ್ವಿನಿ ಗೌಡ (Ashwini Gowda) ಅವರು ಸ್ಪರ್ಧಿಯೊಬ್ಬರಿಗೆ ಬಳಸಿದ ʼಅಮಾವಾಸ್ಯೆʼ ಪದ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ದೊಡ್ಡ ಮಟ್ಟ ಚರ್ಚೆಗೆ ಗ್ರಾಸವಾಗಿದೆ.

ಸುದೀಪ್‌ ಅವರು ಈ ವಾರ ಸ್ಪರ್ಧಿಗಳು ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಪಿಸುಮಾತಿನಲ್ಲಿ ಮಾತನಾಡಬಾರದು. ಸ್ಪರ್ಧಿಗಳಿಗೆ ನೀಡಲಾಗಿರುವ ಈ ಕೊಠಡಿಯಲ್ಲಿ ಆಟ, ಸ್ಪರ್ಧಿಗಳ ಬಗ್ಗೆ ಚರ್ಚೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು.

ಕಿಚ್ಚ ಸುದೀಪ್‌ (Sudeep) ಅವರು ಎಚ್ಚರಿಕೆ ನೀಡಿದ್ದರೂ ಅಶ್ವಿನಿ ಗೌಡ ಮತ್ತು ಜಾಹ್ನವಿ (Jahnavi) ಅವರು ಮತ್ತೆ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಪಿಸುಮಾತಿನಲ್ಲಿ ಮಾತನಾಡಿ ಮನೆಯ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಉಲ್ಲಂಘನೆ ಮಾಡಿದ್ದಕ್ಕೆ ಈ ವಾರ ಮನೆಯಿಂದ ಹೊರಹೋಗಲು ಬಿಗ್‌ ಬಾಸ್‌ ಇಬ್ಬರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು.

 

ಈ ವಿಚಾರದ ಬಗ್ಗೆ ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್‌ ತಮ್ಮ ಮಲಗುವ ಕೋಣೆಯಲ್ಲಿ ಚರ್ಚೆ ಮಾಡುತ್ತಿದ್ದರು. ಈ ವೇಳೆ ಗಿಲ್ಲಿ (Gilli Nata) ಅವರು ಮೂವರನ್ನು ಕಾಲೆಳೆಯಬೇಕೆಂದು ರೂಮಿನ ಬಾಗಿಲಿನ ಹತ್ತಿರ ಬಂದು, ಧ್ರುವ್‌ ಅಣ್ಣನಿಗೆ ಮಲ್ಲಮ್ಮ ಹತ್ತಿರವಾಗಿದ್ದರು ಅವರು ಮನೆಯಿಂದ ಹೋದರು. ಚಂದ್ರಣ್ಣ ಧ್ರುವ್‌ ಜೊತೆ ಮಾತನಾಡುತ್ತಿದ್ದರು. ಅವರೂ ಮನೆಯಿಂದ ಹೊರಹೋದರು. ಕಳೆದ ಏಳು ವಾರದಲ್ಲಿ ಕಾಕ್ರೋಚ್‌ ಸುಧಿ ಅಣ್ಣ ಧ್ರುವ್‌ ಜೊತೆ ಜಾಸ್ತಿ ಮಾತನಾಡುತ್ತನೇ ಇರಲಿಲ್ಲ. ಆದರೆ ಕಳೆದ ವಾರ ಕ್ಲೋಸ್‌ ಆಗಿದ್ದರು. ಅವರು ಹೋದ್ರು. ಈಗ ನೀವು ಕ್ಲೋಸ್‌ ಆಗಿದ್ದೀರಿ. ಹೇಳಬೇಕು ಅಂತ ಅನಿಸಿತ್ತು. ಅದಕ್ಕೆ ಹೇಳ್ದೆ ಎಂದು ಕಿಚಾಯಿಸಿದರು. ಇದನ್ನೂ ಓದಿ:  ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ವಿರುದ್ಧ ದೂರು

ಇದಕ್ಕೆ ಧ್ರುವಂತ್‌, ಮಲ್ಲಮ್ಮ ಮತ್ತು ಚಂದ್ರಣ್ಣ ರಕ್ಷಿತಾ ಜೊತೆ ಕ್ಲೋಸ್‌ ಇದ್ದರು ಎಂದು ತಿರುಗೇಟು ನೀಡಿದರು. ಈ ಸಂಭಾಷಣೆಯ ಕೊನೆಯಲ್ಲಿ ಅಶ್ವಿನಿ ಗೌಡ ಅವರು, “ಅಮಾವಾಸ್ಯೇನ (Amavasye) ಜೊತೆಲಿ ಇಟ್ಕೊಂಡಿದ್ದೀಯಾ ಹೋಗು” ಎಂದು ಹೇಳಿ ಗಿಲ್ಲಿ ಮಾತಿಗೆ ಖಡಕ್‌ ಆಗಿ ಪ್ರತಿಕ್ರಿಯಿಸಿದರು.

ಈ ಚರ್ಚೆ ನಡೆಯುವಾಗ ಗಿಲ್ಲಿ ನೇರವಾಗಿ ಧ್ರುವಂತ್‌ ಅವರನ್ನು ಉದ್ದೇಶಿಸಿ ತಮಾಷೆ ಮಾಡಿದ್ದರು. ಆದರೆ ಈ ಚರ್ಚೆಯಲ್ಲಿ ರಕ್ಷಿತಾ ಭಾಗಿಯಾಗದೇ ಇದ್ದರೂ ಇದ್ದರೂ ಆಕೆಯ ಹೆಸರನ್ನು ಧ್ರುವಂತ್‌ ಪ್ರಸ್ತಾಪ ಮಾಡಿದ್ದರು. ಕೊನೆಯಲ್ಲಿ ಅಶ್ವಿನಿ ಮಾತ್ರ ʼಅಮಾವಾಸ್ಯೆʼ ಎಂದು ಸ್ಪರ್ಧಿಯೊಬ್ಬರನ್ನು ಕರೆದು ಅವರನ್ನು ಐರನ್‌ ಲೆಗ್‌ಗೆ ಹೋಲಿಸಿದರು. ಇದನ್ನೂ ಓದಿ:  ರಕ್ಷಿತಾಗೆ ಆ *** ಪದ ಬಳಸಿದ್ದಕ್ಕೆ ಬೇಜಾರಿದೆ, ಕೈಮುಗಿದು ಕ್ಷಮೆ ಕೇಳ್ತೀನಿ: ಕಾಕ್ರೋಚ್ ಸುಧಿ

ಅಶ್ವಿನಿ ಗೌಡ ತಮ್ಮ ಮಾತಿನಲ್ಲಿ ಅಮಾವಾಸ್ಯೆ ಎಂದು ಯಾರನ್ನು ಸ್ಪಷ್ಟವಾಗಿ ಉಲ್ಲೇಖಿಸದೇ ಇದ್ದರೂ ಪರೋಕ್ಷವಾಗಿ ರಕ್ಷಿತಾ ಅವರನ್ನು ಉದ್ದೇಶಿಸಿಯೇ ಹೇಳಿದ್ದಾರೆ ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ಕೆಲ ದಿನಗಳಿಂದ ಗಿಲ್ಲಿ ರಕ್ಷಿತಾ, ರಘು ಅವರ ಜೊತೆ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಬಿಗ್‌ ಬಾಸ್‌ ಮನೆಯಲ್ಲಿ ರಕ್ಷಿತಾ ಅಮಾವಾಸ್ಯೆನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ಈ ವಾರದ ಮಾತುಕತೆಯಲ್ಲಿ ಸುದೀಪ್‌ ಅವರು ಈ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ದೂರು ದಾಖಲಾಗಿತ್ತು:
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ S ಪದವನ್ನು ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದರು. ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಸ್ಪರ್ಧಿ ರಕ್ಷಿತಾ ಅವರಿಗೆ ‘She is S, ಆ Category ನ ಎಂದು ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ. ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದರು.

Share This Article