ಉಡುಪಿ: ಮೊರಾರ್ಜಿ ದೇಸಾಯಿ ಶಾಲಾ (Morarji Desai Residential School) ಶಿಕ್ಷಕ ಕರ್ತವ್ಯದಿಂದ ವಜಾಗೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಮೊರಾರ್ಜಿ ದೇಸಾಯಿ ಶಾಲಾ ಶಿಕ್ಷಕನನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ವಸತಿ ಶಾಲೆ ವಿದ್ಯಾರ್ಥಿಗಳಿಗೆ ನಿರಂತರ ಬಸ್ಕಿ ಹೊಡೆಸಿದ ಆರೋಪ ಶಿಕ್ಷಕನ ಮೇಲಿದೆ. ಇದನ್ನೂ ಓದಿ: ಮಹೇಶ್ ತಿಮರೋಡಿಗೆ ತಾತ್ಕಾಲಿಕ ರಿಲೀಫ್
ಜನಿವಾರ ಮತ್ತು ಕೈಗೆ ಕಟ್ಟುವ ದಾರದ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತಿದ್ದರು. ಅತಿಥಿ ದೈಹಿಕ ಶಿಕ್ಷಣ ಶಿಕ್ಷಕ ಮದರಸ್ ಮಕಾಂದಾರ್ ಮೇಲೆ ಆರೋಪ ಕೇಳಿಬಂದಿದೆ.
ಕಲಬುರ್ಗಿ ಮೂಲದ ಶಿಕ್ಷಕ ಮದರಸ್ ಮಕಾಂದಾರ್‌ನನ್ನು, ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಶಿಕ್ಷಕನಿಗೆ ಹಲವು ಬಾರಿ ಪ್ರಾಂಶುಪಾಲರು ಎಚ್ಚರಿಕೆ ನೀಡಿದ್ದರು.
ಅದೇ ಚಾಳಿ ಮುಂದುವರೆಸಿದ್ದಕ್ಕೆ ಪ್ರಾಂಶುಪಾಲರು ಕರ್ತವ್ಯದಿಂದ ವಜಾಗೊಳಿಸಿದ್ದಾರೆ.
