ರೆಸ್ಟೋರೆಂಟ್ ಸ್ಟೈಲ್ ಕಾಶ್ಮೀರಿ ಪುಲಾವ್ ಮನೆಯಲ್ಲೇ ಮಾಡಿ

Public TV
2 Min Read

ಪುಲಾವ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಪುಲಾವ್ ಅನ್ನು ತರಕಾರಿಗಳು ಹಾಗೂ ಮಸಾಲೆ ಹಾಕಿ ತಯಾರಿಸಲಾಗುತ್ತದೆ. ಆದರೆ ಕಾಶ್ಮೀರಿ ಪುಲಾವ್ ಇದಕ್ಕಿಂತ ಭಿನ್ನವಾಗಿದೆ. ಕೇಸರಿ ಹಾಗೂ ಡ್ರೈ ಫ್ರೂಟ್ಸ್ ಹಾಕಿ ತಯಾರಿಸಿದ ಕಾಶ್ಮೀರಿ ಪುಲಾವ್ ಕಾಶ್ಮೀರಿ ಜನರ ಮೆಚ್ಚಿನ ತಿನಿಸಾಗಿದೆ. ಟೊಮೆಟೊ, ಈರುಳ್ಳಿ ರಾಯಿತಾ ಅಥವಾ ಮಸಾಲಾ ಗ್ರೇವಿ ಕಾಶ್ಮೀರಿ ಪುಲಾವ್‌ಗೆ ಉತ್ತಮ ಕಾಂಬಿನೇಷನ್. ಹಾಗಿದ್ರೆ ಕಾಶ್ಮೀರಿ ಪುಲಾವ್ ಅನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಬೇಕಾಗುವ ಸಾಮಾಗ್ರಿಗಳು:
ತುಪ್ಪ – 2 ಚಮಚ
ಗೇರುಬೀಜ – 2 ಚಮಚ
ಬಾದಾಮಿ – 2 ಚಮಚ
ದ್ರಾಕ್ಷಿ – 2 ಚಮಚ
ದಾಲ್ಚಿನ್ನಿ – 1 ಇಂಚು
ಕಪ್ಪು ಏಲಕ್ಕಿ – 1
ಲವಂಗ – ಅರ್ಧ ಚಮಚ
ಜೀರಿಗೆ – 1 ಚಮಚ
ಪುಲಾವ್ ಎಲೆ – 1
ಹೆಚ್ಚಿದ ಈರುಳ್ಳಿ – 1
ತುರಿದ ಶುಂಠಿ – 1
ಸೋಂಪು – 1 ಚಮಚ
ಏಲಕ್ಕಿ ಪುಡಿ – ಅರ್ಧ ಚಮಚ
ನೀರು – 2 ಕಪ್
ನೆನೆಸಿದ ಬಾಸ್ಮತಿ ಅಕ್ಕಿ- 1 ಕಪ್
ಉಪ್ಪು – 1 ಚಮಚ
ಕೇಸರಿ ದಳ – ಸ್ವಲ್ಪ
ದಾಳಿಂಬೆ – ಸ್ವಲ್ಪ

ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ನಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ, ಬಿಸಿಯಾದ ತುಪ್ಪಕ್ಕೆ 2 ಚಮಚ ಗೋಡಂಬಿ, 2 ಚಮಚ ಬಾದಾಮಿ ಹಾಗ 2 ಚಮಚ ದ್ರಾಕ್ಷಿ ಹಾಕಿ. ಎಲ್ಲವನ್ನೂ ಚೆನ್ನಾಗಿ ಮಂದ ಉರಿಯಲ್ಲಿ ಹುರಿದುಕೊಳ್ಳಿ.
* ನಂತರ ಅದೇ ತುಪ್ಪಕ್ಕೆ ದಾಲ್ಚಿನ್ನಿ, ಕಪ್ಪು ಏಲಕ್ಕಿ, ಲವಂಗ ಹಾಗೂ ಪುಲಾವ್ ಎಲೆ ಹಾಕಿ ಮಸಾಲೆ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
* ಈಗ ಈರುಳ್ಳಿ, ಶುಂಠಿ ಹಾಕಿ ಈರುಳ್ಳಿ ಘಮ ಬಿಡುವವರೆಗೆ ಹುರಿದುಕೊಳ್ಳಿ. ಬಳಿಕ ಸೋಂಪು, ಏಲಕ್ಕಿ ಹುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಬಳಿಕ 2 ಕಪ್ ನೀರು ಹಾಗೂ 1 ಕಪ್ ಬಾಸ್ಮತಿ ಅಕ್ಕಿ ಹಾಕಿಕೊಳ್ಳಿ. ಹಾಗೆಯೇ 1 ಚಮಚ ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಕದಡಿ ನೀರು ಕುದಿಸಿಕೊಳ್ಳಿ.
* ಈಗ ಕೆಲವು ಕೇಸರಿ ದಳ ಹಾಕಿ, ಮುಚ್ಚಿ 20 ನಿಮಿಷ ಗ್ಯಾಸ್ ಸ್ಲಿಮ್‌ನಲ್ಲಿಡಿ. ಅಕ್ಕಿ ಚೆನ್ನಾಗಿ ಬೆಂದ ಮೇಲೆ, ಹುರಿದ ಡ್ರೈ ಫ್ರುಟ್ಸ್ ಹಾಕಿ, ಮೇಲ್ಗಡೆ ದಾಳಿಂಬೆ ಸೇರಿಸಿ ಇನ್ನೂ 5 ನಿಮಿಷ ಹಾಗೆಯೇ ಬಿಡಿ.
* ಈಗ ಕಾಶ್ಮೀರಿ ಪುಲಾವ್ ಸವಿಯಲು ಸಿದ್ಧ.

Share This Article