ಕೊಪ್ಪಳದಲ್ಲಿ ಮಹಿಳೆಯ ಮೇಲೆ ಗ್ಯಾಂಗ್‌ ರೇಪ್?‌ – ಮದ್ಯ ಕುಡಿಸಿ ನಾಲ್ವರಿಂದ ಅತ್ಯಾಚಾರ ಆರೋಪ

Public TV
0 Min Read

ಕೊಪ್ಪಳ: ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ ಮಹಿಳೆಗೆ ಮದ್ಯ ಕುಡಿಸಿ ಗ್ಯಾಂಗ್‌ ರೇಪ್‌ ಮಾಡಿರುವ ಆರೋಪ ಕೇಳಿಬಂದಿದೆ.

ಹೊಸಪೇಟೆ ಮೂಲದ 39 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಅಸ್ವಸ್ಥಗೊಂಡ ಮಹಿಳೆಯನ್ನ ಕೊಪ್ಪಳ‌ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

ಪರಿಚಯದವರಿಂದ ಹಣ ಪಡೆಯಲು ಹೊಸಪೇಟೆಯಿಂದ ಕುಷ್ಟಗಿ ಪಟ್ಟಣಕ್ಕೆ ಬಂದಿದ್ದರು. ಇಂದು ಸಂಜೆ ಬೈಕ್ ಮೇಲೆ ಕರೆದೊಯ್ದು ಮದ್ಯ ಕುಡಿಸಿ ರೇಪ್ ಮಾಡಿರೋದಾಗಿ ಪೊಲೀಸರ ಮುಂದೆ ಸಂತ್ರಸ್ಥೆ ದೂರಿದ್ದಾರೆ ಎನ್ನಲಾಗಿದೆ.

Share This Article