ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ ಮೋಹಕತಾರೆ

Public TV
1 Min Read

ಸ್ಯಾಂಡಲ್‍ವುಡ್ (Sandalwood) ಕ್ವೀನ್ ರಮ್ಯಾ (Actress Ramya) ಹೊಸ ಫೋಟೋಶೂಟ್ ಮೂಲಕ ಇನ್ಸ್ಟಾದಲ್ಲಿ ಮಿಂಚಿದ್ದಾರೆ. ವೆಸ್ಟರ್ನ್ ಉಡುಗೆ ಧರಿಸಿರುವ ರಮ್ಯಾ ಆಕರ್ಷಕವಾಗಿ ಪೋಸ್ ಕೊಟ್ಟಿದ್ದಾರೆ. ರಮ್ಯಾ ನಯಾ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

 

View this post on Instagram

 

A post shared by Ramya|Divya Spandana (@divyaspandana)

ಸಿನಿಮಾ ಲೋಕಕ್ಕೆ ವಾಪಸ್ ಬರೋದಾಗಿ ಆಗಾಗ ಘೋಷಿಸುವ ರಮ್ಯಾ ಇದುವರೆಗೂ ಸಿನಿಮಾ ಘೋಷಿಸಿಲ್ಲ. ಘೋಷಿಸಿರುವ ಸಿನಿಮಾಗಳಲ್ಲೂ ನಟಿಸಿಲ್ಲ. ಆದರೆ ಈ ಬಾರಿ ಮತ್ತೆ ನಟನೆಗೆ ಮರಳುವ ಎಲ್ಲಾ ನಿರೀಕ್ಷೆಗೆ ಜೀವ ತಂದಂತಿದೆ ಈ ಫೋಟೋಶೂಟ್. ಇದನ್ನೂ ಓದಿ: ನಾನು ಬಯಸಿದಾಗ ನನ್ನೊಟ್ಟಿಗಿರಲಿಲ್ಲ, ದೂರ ಹೋಗ್ಬೇಕು ಅಂದಾಗ ಹತ್ತಿರ ಬರ್ತಿದ್ರು: ಸಂತ್ರಸ್ತ ನಟಿ ಭಾವುಕ

ಈ ಲುಕ್‍ನಲ್ಲಿ 15 ವರ್ಷದ ಹಿಂದಿನ ರಮ್ಯಾ ಕಾಣಿಸ್ಕೊಂಡಿದ್ದಾರೆ. ಕಪ್ಪು ಉಡುಗೆಯಲ್ಲಿ ರಮ್ಯಾ ಬಿಂದಾಸ್ ಪೋಸ್ ಕೊಟ್ಟಿದ್ದಾರೆ. ಮ್ಯಾಗಜಿನ್‍ವೊಂದರ ಮುಖಪುಟಕ್ಕಾಗಿ ರಮ್ಯಾ ಈ ಫೋಟೋಶೂಟ್ ಮಾಡಿಸಿದ್ದು, ಶ್ವಾನಪ್ರಿಯೆ ರಮ್ಯಾ ಬೀದಿನಾಯಿಗಳ ರಕ್ಷಣಾ ಜಾಗೃತಿಗಾಗಿ ಸಂದೇಶ ರವಾನಿಸಿದಂತಿದೆ.

ಇನ್ನಷ್ಟು ಮಾಹಿತಿಯನ್ನ ಖುದ್ದು ರಮ್ಯಾ ಹಂಚಿಕೊಳ್ಳಬೇಕು. ಆದರೆ ಸದ್ಯಕ್ಕಂತೂ ರಮ್ಯಾ ಹೊಸ ಲುಕ್ ಫ್ಯಾನ್ಸ್ ಎದೆಯಲ್ಲಿ ಬಣ್ಣದ ಚಿಟ್ಟೆ ಹರಿಬಿಟ್ಟಂತಾಗಿದೆ. ಇದನ್ನೂ ಓದಿ: ಕಾರವಾರದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ಖಳ ನಟ ಆಶಿಶ್ ವಿದ್ಯಾರ್ಥಿ

Share This Article