ಪಕ್ಷಕ್ಕೆ ಬ್ಲ್ಯಾಕ್‌ಮೇಲ್‌ ಮಾಡುವ ವ್ಯಕ್ತಿ ನಾನಲ್ಲ, ರಾಜೀನಾಮೆ ನೀಡಲ್ಲ: ಡಿಕೆಶಿ

Public TV
1 Min Read

ನವದೆಹಲಿ: ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ (Congress) ಪಕ್ಷಕ್ಕೆ ಬ್ಲಾಕ್‌ಮೇಲ್‌ (Blackmail) ಮಾಡುವ ವ್ಯಕ್ತಿಯಲ್ಲ. ರಾಜೀನಾಮೆ ನೀಡುವುದಿಲ್ಲ. ಮಾಧ್ಯಮಗಳು ಯಾವುದೇ ಗಾಳಿ ಸುದ್ದಿಯನ್ನು ಪ್ರಕಟಿಸಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲಿಯ ತನಕ ಕಾಂಗ್ರೆಸ್ ಪಕ್ಷ ಯಾವ ಸ್ಥಾನದಲ್ಲಿ ಕೆಲಸ ಮಾಡು ಎನ್ನುತ್ತದೋ ಅಲ್ಲಿಯವರೆಗೆ ನಾನು ಒಬ್ಬ ಶಿಸ್ತಿನ ಸಿಪಾಯಿ ತರ ಕೆಲಸ ಮಾಡುತ್ತೇನೆ. ಹಗಲು ರಾತ್ರಿ ಪಕ್ಷ ಕಟ್ಟಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ದುಡಿದಿದ್ದೇನೆ, ಮುಂದಕ್ಕೂ ಕಟ್ಟುತ್ತೇನೆ . ಅಧಿಕಾರಕ್ಕೆ ನಮ್ಮ ಪಕ್ಷ ಬರಲಿದೆ ಇದಕ್ಕೆ ಏನು ಮಾಡಬೇಕೋ ಮಾಡುತ್ತೇನೆ. ನಾನೇಕೆ ರಾಜೀನಾಮೆ ಕೊಡುತ್ತೇನೆ . ಆ ಸಂದರ್ಭ ಉದ್ಭವ ಆಗಿಲ್ಲ. ಸುಮ್ಮನೇ ಗಾಳಿ ಸುದ್ದಿ ಮಾಡಬೇಡಿ ಎಂದರು.  ಇದನ್ನೂ ಓದಿ: ಸಂಪುಟ ಪುನಾರಚನೆಗೆ ಅನುಮತಿ ಸಿಕ್ಕಿದೆ ಅಂದರೆ ನಾಯಕತ್ವ ಬದಲಾವಣೆ ಇಲ್ಲ: ಪರಮೇಶ್ವರ್‌


ಡಿಸೆಂಬರ್ ಒಳಗೆ ನೂರು ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪೂಜೆ ಮಾಡಬೇಕಿದ್ದು ದಿನಾಂಕ ನಿಗದಿಯಾಗಬೇಕಿದೆ. ಡಿಸೆಂಬರ್ 1 ಸಂಸತ್ ಅಧಿವೇಶನ ಶುರುವಾಗಲಿರುವುದರಿಂದ ಒಂದು ಶನಿ ಅಥವಾ ಭಾನುವಾರ ಬನ್ನಿ ಎಂದು ಕರೆಯಲು ಹೋಗುತ್ತಿದ್ದೇನೆ. ರಾಹುಲ್ ಗಾಂಧಿ (Rahul Gandhi) ಮತ್ತು ಖರ್ಗೆ ಸಾಹೇಬ್ರು ಬಂದು ಈ ಕಾರ್ಯ ಮಾಡಬೇಕು ಎನ್ನುವ ಆಸೆ ನನಗಿದೆ. 70 ರಿಂದ 80 ಕಡೆ ಜಾಗ ಸಿದ್ದವಾಗಿದೆ ಎಂದು ಹೇಳಿದರು.

ಸಂಪುಟ ವಿಚಾರ ಅದು ಸಿಎಂ ಸಿದ್ದರಾಮಯ್ಯನವರ ಕರ್ತವ್ಯ ಮತ್ತು ಹೈಕಮಾಂಡ್‌ ಅವರಿಗೆ ಬಿಟ್ಟ ವಿಚಾರ. ನನ್ನನ್ನು ಕರೆದಾಗ ಹೋಗುತ್ತೇನೆ. ನಾನು ಖರ್ಗೆ ಅವರ ಬಳಿ ಈ ವಿಚಾರ ಚರ್ಚೆ ಮಾಡುವುದಿಲ್ಲ. ನಾನು ಸೀದ ಡೇಟ್ ಕೇಳಲು ಹೋಗುತ್ತಿದ್ದೇನೆ ಎಂದರು. ಇದನ್ನೂ ಓದಿ: ಸಂಪುಟ ಪುನಾರಚನೆಗೆ ಹೈಕಮಾಂಡ್‌ ಒಪ್ಪಿಗೆ – ಯಾರು ಔಟ್‌? ಯಾರು ಇನ್‌?

ನಾಯಕತ್ವ ಬದಲಾವಣೆ ವಿಚಾರ ನೀವು ಚರ್ಚೆ ಮಾಡುತ್ತಿದ್ದೀರಿ. ನನ್ನಲ್ಲಿ, ಸಿದ್ದರಾಮಯ್ಯ, ಹೈಕಮಾಂಡ್ ಜೊತೆ ಎಲ್ಲೂ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.

Share This Article