– ರಿಲೇಷನ್‌ಶಿಪ್‌ನಲ್ಲಿ ಇದ್ದಾಗ ತುಂಬಾ ಚೆನ್ನಾಗಿ ನೋಡ್ಕೊಂಡಿದ್ದಾರೆ ಅನ್ನೋದಂತು ಸತ್ಯ
ಬಿಗ್‌ಬಾಸ್ (Bigg Boss) ಮಾಜಿ ಸ್ಪರ್ಧಿ ಕಂ ನಟಿಯೊಬ್ಬರಿಗೆ ಉದ್ಯಮಿ ಅರವಿಂದ್ ರೆಡ್ಡಿ ಕಿರುಕುಳ ನೀಡಿರುವ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆಯುತ್ತಿದೆ. ನಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದೇನೆ ಅನ್ನೋ ಅರವಿಂದ ರೆಡ್ಡಿ (Arvind Reddy) ಆರೋಪಕ್ಕೆ ನಟಿ ತಿರುಗೇಟು ನೀಡಿದ್ದಾರೆ. ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ., ಅವರ ಕೆಪಾಸಿಟಿ ಇದ್ದಿದ್ದು 1 ಕೋಟಿ ರೂ. ನನ್ನ ಸ್ಟೇಟಸ್‌ನಲ್ಲಿ ನಾನೇನು ಮಾಡಬೇಕೋ ಮಾಡಿದ್ದೇನೆ. ಅವರ ಸ್ಟೇಟಸ್‌ನಲ್ಲಿ ಅವರೇನು ಮಾಡಬೇಕೋ ಮಾಡಿದ್ದಾರೆ. ಒಟ್ನಲ್ಲಿ ಜೊತೆಗಿದ್ದ ಒಂದು ವರ್ಷ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಅಂತ ಸಂತ್ರಸ್ತ ನಟಿ ಹೇಳಿದ್ದಾರೆ.
ಪ್ರಕರಣ ಸಂಬಂಧ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಸುದೀರ್ಘವಾಗಿ ನಟಿ ಮಾತನಾಡಿದ್ದಾರೆ. 2023 ರಲ್ಲಿ ಶ್ರೀಲಂಕಾದ ಟೂರ್ನಮೆಂಟ್‌ನಲ್ಲಿ ನನಗೆ ಅರವಿಂದ್ ಪರಿಚಯವಾಯ್ತು. ಅವರೊಟ್ಟಿಗೆ ರಿಲೇಷನ್‌ಶಿಪ್‌ನಲ್ಲಿದ್ದ ಒಂದೂವರೆ ವರ್ಷ ನಾನು ಕೆಲಸಕ್ಕೆ ಹೋಗುತ್ತಿರಲಿಲ್ಲ. ಎಲ್ಲಾ ಅವರೇ ನೋಡಿಕೊಳ್ತಿದ್ರು. ಏಕೆಂದ್ರೆ ಅವರ ಲೈಫ್‌ಸ್ಟೈಲ್ ಡಿಫರೆಂಡ್ ಇತ್ತು. ನನಗೆ ಮಾತ್ರವಲ್ಲ ಅವರ ಜೊತೆಗೆ ಯಾರೇ ಬಂದರೂ ಖರ್ಚು ಮಾಡಲು ಬಿಡುತ್ತಿರಲಿಲ್ಲ. ಯಾಕೆ ಆಟೋದಲ್ಲಿ ಓಡಾಡ್ತಿಯಾ ಅಂತ ಅವರೇ ಕಾರು ಕಳಿಸ್ತಿದ್ರು. 4-5 ಬಾರಿ ಫಾರಿನ್ ಟ್ರಿಪ್ ಹೋಗಿದ್ದೆ, ಅದಕ್ಕೂ ಅವರೇ ಫಂಡಿಂಗ್ ಮಾಡಿದ್ರು. ಬಾಡಿಗೆ ಮನೆಯಲ್ಲಿದ್ದ ನಾನು 10,000 ರೂ. ಸಂಪಾದನೆ ಮಾಡ್ತಿದ್ದೆ. ಅದ್ರಲ್ಲಿ ಏನು ಮಾಡಬೇಕೋ ಅದನ್ನ ಮಾಡಿದ್ದೀನಿ. ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ. ಮಾತ್ರ, ಅವರ ಕೆಪಾಸಿಟಿ 1 ಕೋಟಿ ರೂಪಾಯಿ. ಅವ್ರ ಸ್ಟೇಟಸ್ ದೊಡ್ಡದಿತ್ತು, ಹಾಗೆ ಮಾಡಿದ್ದಾರೆ. ಆದ್ರೆ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಿಲ್ಲ. ಜೊತೆಯಲ್ಲಿದ್ದಾಗ ಚೆನ್ನಾಗಿ ನೋಡಿಕೊಂಡಿದ್ದಾರೆ ಅನ್ನೋದಂತೂ ಸತ್ಯ ಎಂದು ಹೇಳಿದರು.
ರಿಲೇಷನ್‌ಶಿಪ್ ಮುಗಿದ ಮೇಲೆ ಅವರು ಕೊಟ್ಟಿರುವ ಎಲ್ಲಾ ಗಿಫ್ಟ್‌ಗಳನ್ನ ವಾಪಸ್ ಕೊಟ್ಟಿದ್ದೇನೆ. ಮನೆ ಅಡ್ವಾನ್ಸ್‌ಗೆ ಅಂತ ಕೊಟ್ಟಿದ್ದ 5 ಲಕ್ಷ ಹಣವನ್ನೂ ವಾಪಸ್ ಕೊಟ್ಟಿದ್ದೇನೆ. ಆದ್ರೆ ಜೊತೆಗಿದ್ದಾಗ ನನ್ನ ಮೇಲೆ ಖರ್ಚು ಮಾಡಿದಷ್ಟೂ ಹಣವನ್ನ ವಾಪಸ್ ಕೊಡುವಷ್ಟು ತಾಕತ್ತು ನನಗಿಲ್ಲ ಅಂತ ಹೇಳಿದ್ರು.
ಮುಂದುವರಿದು ಮಾತನಾಡಿದ ನಟಿ…. ನನಗೋಸ್ಕರ 5 ಕೋಟಿ ಖರ್ಚು ಮಾಡಿದ್ದೀನಿ, ಮನೆ ಕೊಡಿಸಿದ್ದೀನಿ, ಪೋಶೆ ಕಾರು ಕೊಡಿಸಿದ್ದೇನೆ ಅನ್ನೋದೆಲ್ಲ ಸುಳ್ಳು. ಅವರು ಮನೆ ಕೊಡಿಸಿದ್ದರೆ ನಾನ್ಯಾಕೆ ಬಾಡಿಗೆ ಮನೆಯಲ್ಲಿ ಇರ್ತಿದ್ದೆ. ನನ್ನ ಹೆಸರಲ್ಲಿ ರಿಜಿಸ್ಟರ್‌ಆಗಿದ್ದರೆ ತೋರಿಸಲಿ. ಇನ್ನೂ ಕಾರು ಅವರ ಅಣ್ಣನ ಜೊತೆಯಲ್ಲಿ ಬಂದಾಗ ತಂದಿದ್ರು, ಮೈಸೂರಲ್ಲಿ ಮೀಟ್ ಮಾಡಿದ್ರು. ನಾನು 5 ನಿಮಿಷ ಕೂಡ ಇರಿಸಿಕೊಳ್ಳಲಿಲ್ಲ, ಬೆಂಗಳೂರಿಗೆ ವಾಪಸ್ ಕಳಿಸಿದೆ. ಆ ಕಾರು ಕೂಡ ಅವರ ಹೆಸರಲ್ಲೇ ಇದೆ ಅಂತ ನಟಿ ಸ್ಪಷ್ಟಪಡಿಸಿದ್ರು.


