– ಎಂಜಿನಿಯರಿಂಗ್ ಸ್ಟೂಡೆಂಟ್ ಖಾಸಗಿ ಅಂಗದ ಬಗ್ಗೆ ಅಸಭ್ಯವಾಗಿ ಮಾತನಾಡ್ತಿದ್ದ
– ಪ್ರತಿಷ್ಠಿತ ಕಾಲೇಜು ಉಪನ್ಯಾಸಕನ ವಿರುದ್ಧ FIR
ಮೈಸೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜು ಉಪನ್ಯಾಸಕನ ವಿರುದ್ಧ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ (Jayalakshmipuram Police Station) ಪ್ರಕರಣ ದಾಖಲಾಗಿದೆ.
ಕಾಮುಕ ಉಪನ್ಯಾಸಕ ಭರತ್ ಭಾರ್ಗವ ವಿರುದ್ಧ BNS ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಹುಡುಗ ಮನೆಗೆ ಬಂದು ಹೋಗೋದು ಗೊತ್ತಾಯ್ತು, ಅದಕ್ಕೆ ದೂರಾದೆ – ನಟಿ ಆರೋಪಕ್ಕೆ ಅರವಿಂದ್ ರೆಡ್ಡಿ ಪ್ರತಿಕ್ರಿಯೆ

ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ (Engineering College) ಉಪನ್ಯಾಸಕನಾಗಿದ್ದ ಭರತ್ ಭಾರ್ಗವ ಅದೇ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೆಚ್ಚು ಮಾರ್ಕ್ಸ್ ಕೊಡುತ್ತೇನೆ, ಒಳ್ಳೆಯ ಕೆಲಸ ಕೊಡಿಸ್ತೇನೆ. ಹೊರಗೆ ಪಬ್ಗೆ ಹೋಗಿ ಮಜಾ ಮಾಡೋಣ ಬಾ ಅಂತ ಕರೆಯುತ್ತಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಇದನ್ನೂ ಓದಿ: ‘ಡಿಜಿಟಲ್ ಗೋಲ್ಡ್’ ಬಗ್ಗೆ ನಿಮಗೆಷ್ಟು ಗೊತ್ತು?- ಹೂಡಿಕೆ ಮಾಡ್ತಿದ್ದೀರಾ? – ಹಾಗಾದ್ರೆ ಎಚ್ಚರ!
ಅಲ್ಲದೇ ಭರತ್ನ ಅಸಭ್ಯ ವರ್ತನೆ ಬಗ್ಗೆ ಮಹಿಳಾ ಉಪನ್ಯಾಸಕರಿಗೆ ದೂರು ನೀಡಿದ್ದಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಖಾಸಗಿ ಅಂಗಗಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾನೆ. ತಾನು ಹೇಳಿದಂತೆ ಕೇಳದಿದ್ರೆ ಫೇಲ್ ಮಾಡೋದಾಗಿ ಬೆದರಿಕೆ ಕೂಡ ಹಾಕಿದ್ದಾನೆ. ಹಾಗಾಗಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾಳೆ. ಕಾಮುಕ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
