ಬೆಂಗಳೂರು: ನಟಿಯೊಬ್ಬರು ಮಾಡಿರುವ ಕಿರುಕುಳ ಆರೋಪದ ಬಗ್ಗೆ ಉದ್ಯಮಿ ಅರವಿಂದ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗ ಮನೆಗೆ ಬಂದು ಹೋಗೋದು ಗೊತ್ತಾಯ್ತು. ಅದನ್ನ ಕೇಳಿದಾಗ ನಾವಿಬ್ಬರೂ ದೂರ ಆದೆವು ಎಂದಿದ್ದಾರೆ.
2023 ರಲ್ಲಿ ಶ್ರೀಲಂಕಾದ ಟೂರ್ನಮೆಂಟ್‌ನಲ್ಲಿ ನನಗೆ ನಟಿ ಪರಿಚಯವಾಯ್ತು. ನಂತರ ನನಗೆ ನನ್ನ ಸ್ನೇಹಿತರಿಗೆ ಅವರು ಹತ್ತಿರವಾದರು. ಬಳಿಕ ಲೀವಿಂಗ್ ರಿಲೇಷನ್ ಶಿಪ್ ಸ್ಟಾರ್ಟ್ ಆಯ್ತು. ಇವರು ಹುಡುಗನ ಜೊತೆ ತಾಂಜೇನಿಯಾ ಟ್ರಿಪ್ ಹೋಗಿದ್ರು. ಬಳಿಕ ಹುಡುಗ ಮನೆಗೆ ಬಂದು ಹೋಗೋದು ಗೊತ್ತಾಯ್ತು. ಅದನ್ನ ಕೇಳಿದಾಗ ನಾವಿಬ್ಬರೂ ದೂರ ಆದೆವು ಎಂದಿದ್ದಾರೆ. ಇದನ್ನೂ ಓದಿ: ನಾನು 3 ಕೋಟಿ ಖರ್ಚು ಮಾಡಿ, ಸೈಟ್, ಕಾರು ಕೊಡ್ಸಿದ್ದೆ, ಆದ್ರೆ ಅವ್ಳು ಬೇರೆಯವನೊಂದಿಗೆ ಕಾಣಿಸಿಕೊಳ್ತಿದ್ಲು – ನಟಿ ವಿರುದ್ಧ ಅರವಿಂದ್ ರೆಡ್ಡಿ ಆರೋಪ

ನಾನು ಅವರಿಗೆ ಫೋನ್ ಮಾಡಿ ತೊಂದರೆ ಮಾಡ್ತಿದ್ದೇನೆಂದು ಆರೋಪ ಮಾಡಿದ್ದಾರೆ. 2024 ರಲ್ಲಿ ಅವರನ್ನ ಪಿಕ್ಚರ್ಸ್ ರಾಂಗ್ ಆಗಿ ಪೋಟ್ರೋ ಮಾಡ್ತಿದ್ದೀನಿ ಎಂದು ಆರೋಪಿಸಿದ್ದರು. ಅದರಲ್ಲಿ ಯಾವುದು ತಪ್ಪು ಇರಲಿಲ್ಲ. ಅವರ ಫ್ಯಾನ್ ಕ್ಲಬ್‌ನವರು ಅದನ್ನ ಹಾಕ್ತಿದ್ರು. ಇತ್ತೀಚೆಗೆ ನಾನು ಅವರ ಮನೆ ಓನರ್‌ಗೆ ಪೋಟೋ ಶೇರ್ ಮಾಡಿದ್ದೀನಿ ಎಂದು ಆರೋಪಿಸಿದ್ದಾರೆ.
ಆರ್.ಆರ್.ನಗರ ಪೊಲೀಸರು ನೋಟಿಸ್ ಕೊಟ್ಟಿದ್ರು. ಆಗ ನಾನು ಶ್ರೀಲಂಕಾದಲ್ಲಿದ್ದೆ. ಇವತ್ತು ನಾನು ಆರ್.ಆರ್.ನಗರ ಠಾಣೆಗೆ ಹೇಳಿಕೆ ಕೊಡಲು ಬಂದೆ. ಅಷ್ಟೋತ್ತಿಗೆ ಎಲ್.ಒ.ಸಿ ಮಾಡಿ ನನ್ನನ್ನ ಠಾಣೆಗೆ ಕರೆತಂದ್ರು. ಸ್ಟೇಷನ್ ಬೇಲ್ ಇದ್ರು ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ್ರು. ಆಮೇಲೆ ಕೋರ್ಟ್ ಬೇಲ್ ಕೊಟ್ಟಿದೆ. ಪೊಲೀಸ್ ಅಧಿಕಾರಿಗಳು ನನ್ನ ಸ್ಟೋರಿಯನ್ನು ಕೇಳಿದ್ದಾರೆ.
ಯಾರು ಲೆಟರ್, ಫೋಟೋ ಕಳಿಸಿದ್ದಾರೆ ನನಗಂತೂ ಗೊತ್ತಿಲ್ಲ. ದುಬೈ ಸೈಮಾಗೆ ತಾಂಜೇನಿಯಾಗೆ ಹೋಗಲು ಸ್ಪಾನ್ಸರ್ ಮಾಡಿ ಕಳಿಸಿದ್ದೆ. ಅವರಿಗೆ ನನ್ನ ಪಾರ್ಟನರ್ ಆಗಿ ಏನು ಮಾಡಬೇಕು ಮಾಡ್ತಿದ್ದೆ. ಆದ್ರೆ ಆ ಹುಡ್ಗನ ಜೊತೆ ರೆಗ್ಯೂಲರ್ ಇಂಟ್ರಾಕ್ಟ್ ಮಾಡ್ತಿದ್ರು ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಅವಳು ನನ್ನ ಭೇಟಿ ಮಾಡಿದ್ದು 2023ರಲ್ಲಿ, 2024 ರಲ್ಲಿ ಪೊರ್ಶೆ ಕಾರು ಕೊಡಿಸಿದ್ದೆ. ಅವರ ತಮ್ಮನ ಮದುವೆಗೆ ಅವರ ಮನೆ ಗೃಹಪ್ರವೇಶಕ್ಕೆ ಸಹಾಯ ಮಾಡಿದ್ದೆ. ಈಗ ನನ್ನ ಮೇಲೆ ಬೇಡವಾದ ಅಪವಾದ ಹಾಕ್ತಿದ್ದಾರೆ. ಅವಳಿಗೆ ಕೊಟ್ಟಿದ್ದ ಕಾರು ನನ್ನತ್ರನೇ ಇದೆ. ಸೈಟ್ ಹುಡುಗಿ ಹೆಸರಲ್ಲಿ ಅಗ್ರಿಮೆಂಟ್ ರಿಜಿಸ್ಟರ್ ಮಾಡಿದ್ದೀನಿ. ಹರ್ಷ ಅನ್ನೊರ ಅಕೌಂಟ್‌ನಿಂದ ದುಡ್ಡು ಬಂದಿದೆ ಐ ವಿಲ್ ಕಂ ಬ್ಯಾಕ್ ಅಂತ ಹೋದವಳು ಮತ್ತೆ ಬಂದಿಲ್ಲ ಎಂದಿದ್ದಾರೆ.
ಮಹಿಳಾ ಸ್ಟೇಷನ್‌ಗೆ ಕರೆಸೋವರೆಗೂ ಅವಳನ್ನ ನೋಡಿಲ್ಲ ನನ್ನ ತಪ್ಪಿದ್ರೆ ನನಗೆ ಶಿಕ್ಷೆ ಆಗುತ್ತೆ. ಅವರ ತಪ್ಪಿದ್ರೆ ಅವರಿಗೆ ಶಿಕ್ಷೆ ಆಗುತ್ತೆ. ಇದೆಲ್ಲ ಮರೆತಿರೋ ಕಥೆ, ಮರೆತಿರೋ ಕಥೆ ಬಗ್ಗೆ ನಾನು ಯೋಚನೆ ಮಾಡಲ್ಲ. ನಾನು ಕೌಂಟರ್ ಅಟ್ಯಾಕ್ ಮಾಡಲ್ಲ. ಸಾಬೀತು ಮಾಡಲಿಕ್ಕೆ ಏನೇನು ದಾಖಲಾತಿ ಬೇಕೋ ಅದನ್ನ ನಾನು ಪ್ರೊಡ್ಯೂಸ್ ಮಾಡ್ತೀನಿ. 2024 ಜೂನ್ 10 & ಜೂನ್ 11 ಮದುವೆ ಅಂದ್ಕೊಂಡಿದ್ವಿ ಆದರೆ ಆಗಲಿಲ್ಲ. ಬೇರೆಯವರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂದು ದೂರಾ ಆದೆ ಎಂದಿದ್ದಾರೆ. ಇದನ್ನೂ ಓದಿ: ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಉದ್ಯಮಿ ಅರವಿಂದ್ ರೆಡ್ಡಿಗೆ ಜಾಮೀನು
