ನಮಗೆಲ್ಲ ಸುಲಭವಾಗಿ, ಸರಳ ಹಂತಗಳೊಂದಿಗೆ ಅಡುಗೆ ಮಾಡೋದು ಅಂದರೆ ತುಂಬಾ ಇಷ್ಟ. ಯಾಕೆಂದರೆ ಅದು ಕಡಿಮೆ ಸಮಯದಲ್ಲಿ ಮುಗಿದು ಹೋಗುತ್ತದೆ. ಅದಕ್ಕೆ ಇವತ್ತು ಸುಲಭವಾಗಿ ಬ್ರೆಡ್ ದೋಸೆ ಮಾಡಿ. ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ಬ್ರೆಡ್
ರವೆ
ಮೊಸರು
ಅಕ್ಕಿ ಹಿಟ್ಟು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಮೊದಲಿಗೆ ಬ್ರೆಡ್ ಅನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಅಕ್ಕಿ ಹಿಟ್ಟು, ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಆ ಮಿಶ್ರಣವನ್ನು ದೋಸೆಯ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಬಳಿಕ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು, ಕಾದ ತವೆಯ ಮೇಲೆ ದೋಸೆ ಹಾಕಿಕೊಳ್ಳಿ.
ಗರಿಗರಿಯಾದ ದೋಸೆ ತಯಾರಾಗುತ್ತದೆ. ಇದನ್ನು ಚಟ್ನಿ ಅಥವಾ ಆಲುಗಡ್ಡೆ ಪಲ್ಯದೊಂದಿಗೆ ಸವಿಯಬಹುದು.

