ಕೃಷ್ಣ ಮೃಗಗಳಿಗೆ ಕಾಡಿತ್ತಾ ಬ್ಯಾಕ್ಟೀರಿಯಾ ಸೋಂಕು? – ವೈದ್ಯರು ಹೇಳೋದೇನು?

Public TV
1 Min Read

ಬೆಳಗಾವಿ: ಇಲ್ಲಿನ (Belagavi) ರಾಣಿ ಚೆನ್ನಮ್ಮ ಮೃಗಾಲಯದಲ್ಲಿ (Kittur Rani Chennamma Zoo) 28 ಕೃಷ್ಣ ‌ಮೃಗಗಳು (Black Buck)  ದಾರುಣವಾಗಿ ಸಾವನ್ನಪ್ಪಿವೆ. ಈ ಬಗ್ಗೆ ಪಶುವೈದ್ಯ ನಾಗೇಶ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಡಯಗ್ನೋಸ್ ಪ್ರಕಾರ ಬ್ಯಾಕ್ಟೀರಿಯಾ, ವೈರಲ್‌ ಸೋಂಕು ಆಗಿದೆ‌ ಆದರೂ ವರದಿ ಬಂದ ನಂತರ ನಿಖರವಾದ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

ನಮ್ಮ ಮೃಗಾಲಯದಲ್ಲಿ ಕಳೆದ ಎರಡು‌ ಮೂರು ದಿನಗಳಿಂದ ಕೃಷ್ಣ ಮೃಗಗಳ ಸಾವು ಸಂಭವಿಸುತ್ತಿದೆ. ಅವಶ್ಯಕ ಔಷಧಿಯನ್ನು ನೀಡಲಾಗುತ್ತಿದೆ. ಅದರೆ ಆ ಪ್ರಾಣಿಗಳಿಗೆ ಬಂದ ರೋಗದ ಕುರಿತು ಅಧ್ಯಯನ ಮಾಡಲು ಶವಪರೀಕ್ಷೆ ನಡೆಸಿ, ಸ್ಯಾಂಪಲ್‌ ಸಂಗ್ರಹಿಸಿದ್ದೇವೆ. ಸ್ಯಾಂಪಲ್‌ನ್ನು ಬನ್ನೇರುಘಟ್ಟ ಮೃಗಾಲಯದಲ್ಲಿರುವ ಲ್ಯಾಬ್‌ಗೆ ಕಳುಹಿಸಿದ್ದೇವೆ. ಈ ಬಗ್ಗೆ ವರದಿ ಬರಬೇಕಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು; ಮಾರಣಾಂತಿಕ ವೈರಸ್‌ಗೆ ಬಲಿಯಾಗಿರೋ ಶಂಕೆ!

ಮೃಗಾಲಯದ ಉಳಿದ ಯಾವುದೇ ಪ್ರಾಣಿಗಳಿಗೆ ಸೊಂಕು ತಗುಲಿಲ್ಲ, ಎಕಾಏಕಿ‌ ಆದದ್ದರಿಂದ ಲ್ಯಾಬ್ ವರದಿ ಬರುವವರೆಗೂ ಚಿಕಿತ್ಸೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ರೀತಿಯ ಕ್ವಾರಂಟೈನ್‌ ನಿಯಮ ಪಾಲಿಸಿದ್ದೇವೆ. ನಿಗವಹಿಸಿ ಪ್ರಾಣಿಗಳನ್ನು ರಕ್ಷಿಸಲು‌ ಕ್ರಮ ಜರುಗಿಸಿದ್ದೇವೆ. ಮೈಸೂರು ಮೃಗಾಲಯದ ಡಾ.ಶಶಿಧರ್ ಅವರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿ ರೋಗದ ಗುಣಲಕ್ಷಣಗಳನ್ನು ತಿಳಿಸಿ ಚಿಕಿತ್ಸೆ ನೀಡಿದ್ದೇವೆ.

ಕ್ಲಿನಿಕಲ್ ‌ಮೆಡಿಸಿನ್ ಪ್ರಕಾರ ನನ್ನ ಕರ್ತವ್ಯ ಮಾಡಿದ್ದೇನೆ. ಅವರದು ಪ್ರಯೋಗ ಶಾಲೆ ಅನುಭವದ ಪ್ರಕಾರ ಅವರು ಚಿಕಿತ್ಸೆ ಹೇಳುತ್ತಾರೆ. ವರದಿ ಬಂದ ನಂತರ ನಿಖರವಾಗಿ ಸಮಸ್ಯೆ ತಿಳಿಯಲಿದೆ ಎಂದಿದ್ದಾರೆ. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 19 ಜಿಂಕೆಗಳ ಅಸಹಜ ಸಾವು – ತನಿಖೆಗೆ ಈಶ್ವರ್ ಖಂಡ್ರೆ ಆದೇಶ

Share This Article