ರಾಹುಲ್‌ ಗಾಂಧಿ ಯಾತ್ರೆ ಮಾಡಿದ್ದ ಮಾರ್ಗದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ

Public TV
2 Min Read

ನವದೆಹಲಿ: ಬಿಹಾರ ಚುನಾವಣಾ ಫಲಿತಾಂಶದಿಂದ (Bihar Election Results) ಕಾಂಗ್ರೆಸ್‌ಗೆ (Congress) ಭಾರಿ ಮುಖಭಂಗವಾಗಿದೆ. ಬಿಜೆಪಿ ವಿರುದ್ಧ ‘ವೋಟ್‌ ಚೋರಿ’ ಆರೋಪ ಮಾಡಿ ರಾಹುಲ್‌ ಗಾಂಧಿ ಯಾತ್ರೆ ನಡೆಸಿದ ಭಾಗಗಳಲ್ಲೂ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿದೆ.

ಕಳೆದ ಕೆಲವು ಚುನಾವಣೆಗಳಲ್ಲಿ ಪಕ್ಷವು ಮತಗಳನ್ನು ಕ್ರೋಢೀಕರಿಸಲು ಸಹಾಯ ಮಾಡಿದೆ ಎಂದು ನಂಬಿದ್ದ ಹಿಂದಿನ ಎರಡು ಯಾತ್ರೆಗಳಿಂದ ರಾಹುಲ್‌ ಗಾಂಧಿ ಉತ್ತೇಜಿತರಾಗಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ರಾಹುಲ್ ಗಾಂಧಿ (Rahul Gandhi) ಮತದಾರರ ಅಧಿಕಾರ ಯಾತ್ರೆಯನ್ನು ಕೈಗೊಂಡಿದ್ದರು. ಇದನ್ನೂ ಓದಿ: 2020 ರಲ್ಲಿ 1, ಈ ಬಾರಿ 20+ ಕ್ಷೇತ್ರಗಳಲ್ಲಿ ಜಯ – ಯುವ ನಾಯಕ, ಮೋದಿಯ ಹನುಮ ಚಿರಾಗ್‌ ಕಮಾಲ್‌!

ಯಾತ್ರೆಯು ಸಸಾರಂನಿಂದ ಪ್ರಾರಂಭವಾಗಿ ಪಾಟ್ನಾದಲ್ಲಿ ಕೊನೆಗೊಂಡಿತ್ತು. 25 ಜಿಲ್ಲೆಗಳು ಮತ್ತು 110 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಸುಮಾರು 1,300 ಕಿ.ಮೀ.ಗಳನ್ನು ಕ್ರಮಿಸಿತ್ತು. ಆದರೆ, ಈ ಮಾರ್ಗದಲ್ಲಿ ಒಂದೇ ಒಂದು ಕ್ಷೇತ್ರವೂ ಗಾಂಧಿಯವರ ಪಕ್ಷದ ಕಡೆ ಬಂದಿಲ್ಲ.

ಬಿಹಾರದಲ್ಲಿ ಕಾಂಗ್ರೆಸ್‌ 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ, ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ವಾಲ್ಮೀಕಿ ನಗರ, ಚನ್ಪಾಟಿಯಾ, ಅರಾರಿಯಾ, ಕಿಶನ್‌ಗಂಜ್ ಮತ್ತು ಮಣಿಹರಿ ಮುಂದಿದೆ. ಸದ್ಯದ ಅಂಕಿಅಂಶ ಪ್ರಕಾರ, ಎರಡು ಕ್ಷೇತ್ರಗಳ್ಳಲ್ಲಷ್ಟೇ ಗೆಲುವು ದಾಖಲಿಸಿದೆ.

ಗಾಂಧಿಯವರ ಹಿಂದಿನ ಯಾತ್ರೆಗಳು 2024 ರ ಲೋಕಸಭಾ ಚುನಾವಣೆ ಮತ್ತು 2023 ರ ತೆಲಂಗಾಣ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಲು ಸಹಾಯ ಮಾಡಿದೆ ಎಂದು ಕಾಂಗ್ರೆಸ್ ನಂಬಿತ್ತು. 2022 ಮತ್ತು 2024 ರ ನಡುವೆ ಗಾಂಧಿಯವರು ಕೈಗೊಂಡ ಎರಡು ಪ್ಯಾನ್-ಇಂಡಿಯಾ ‘ಭಾರತ್ ಜೋಡೋ’ ಯಾತ್ರೆಗಳ ಮಾರ್ಗಗಳಲ್ಲಿ ಕಾಂಗ್ರೆಸ್ 41 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ತೆಲಂಗಾಣದಲ್ಲಿ, ಅದು ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿತು. ಇದನ್ನೂ ಓದಿ: ಉತ್ತಮ ಆಡಳಿತ ಗೆದ್ದಿದೆ, ಅಭಿವೃದ್ಧಿ ಗೆದ್ದಿದೆ, ಸಾಮಾಜಿಕ ನ್ಯಾಯ ಗೆದ್ದಿದೆ – ಪ್ರಧಾನಿ ಮೋದಿ ಹರ್ಷ

ಆದರೆ ಬಿಹಾರದ ಗಂಗಾ ಬಯಲಿನಲ್ಲಿ ಗಾಂಧಿ ಮಾಂತ್ರಿಕತೆ ಮಾಯವಾದಂತೆ ಕಾಣುತ್ತಿದೆ. ಎನ್‌ಡಿಎ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ ಮತ್ತು ಜೆಡಿಯು ಎರಡೂ ಸ್ಪರ್ಧಿಸಿದ್ದ ಹೆಚ್ಚಿನ ಸ್ಥಾನಗಳನ್ನು ಗೆದ್ದಿವೆ. ಬಿಜೆಪಿ ಈಗ 89 ಮತ್ತು ಜೆಡಿಯು 84 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅವರ ಮಿತ್ರಪಕ್ಷಗಳು ಸಹ ಪ್ರಭಾವಶಾಲಿ ಪ್ರದರ್ಶನ ನೀಡಿವೆ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಸ್ಪರ್ಧಿಸಿದ್ದ 28 ಸ್ಥಾನಗಳಲ್ಲಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಗಾಂಧಿಯವರ ‘ಮತ ಕಳ್ಳತನ’ ಆರೋಪವು ಮತದಾರರನ್ನು ಮನವೊಲಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಬಿಹಾರ ಫಲಿತಾಂಶಗಳು ಸೂಚಿಸುತ್ತವೆ. ಬಿಹಾರದ ಮತದಾರರು ಕೂಡ ಈಗ ಗಾಂಧಿಯವರ ಆರೋಪಗಳನ್ನು ತಿರಸ್ಕರಿಸಿದಂತೆ ಕಾಣುತ್ತಿದೆ.

Share This Article