ಉತ್ತಮ ಆಡಳಿತ ಗೆದ್ದಿದೆ, ಅಭಿವೃದ್ಧಿ ಗೆದ್ದಿದೆ, ಸಾಮಾಜಿಕ ನ್ಯಾಯ ಗೆದ್ದಿದೆ – ಪ್ರಧಾನಿ ಮೋದಿ ಹರ್ಷ

Public TV
2 Min Read

– ಬಿಹಾರದ ಅಭಿವೃದ್ಧಿಗಾಗಿ ದಣಿವರಿಯದೇ ಕೆಲಸ ಮಾಡ್ತೇವೆ ಎಂದ ಪ್ರಧಾನಿ

ಪಾಟ್ನಾ: ಬಿಹಾರದಲ್ಲಿ ಉತ್ತಮ ಆಡಳಿತ ಗೆದ್ದಿದೆ, ಅಭಿವೃದ್ಧಿ ಗೆದ್ದಿದೆ, ಜನಪರ ಮನೋಭಾವ ಗೆದ್ದಿದೆ, ಸಾಮಾಜಿಕ ನ್ಯಾಯ ಗೆದ್ದಿದೆ ಅಂತ ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ (Bihar Election 2025) ಈಬಾರಿ ಎನ್‌ಡಿಎಗೆ ಜನ ಆಶೀರ್ವಾದ ಮಾಡಿದ್ದಾರೆ. ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ಇಂದಿನ ಚುನಾವಣಾ ಫಲಿತಾಂಶದ ಕುರಿತು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ ಪೋಸ್ಟ್‌ ಹಂಚಿಕೊಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಬಿಹಾರದ ಅಭಿವೃದ್ಧಿಗಾಗಿ ಶ್ರಮಿಸುವ ಪ್ರಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ʻನಿಮೋʼ ಸುನಾಮಿ ಸಕ್ಸಸ್‌ – ಎನ್‌ಡಿಎ ಗೆಲುವಿಗೆ ಕಾರಣಗಳೇನು?

ಮೋದಿ ಎಕ್ಸ್‌ನಲ್ಲಿ ಏನಿದೆ?

ಉತ್ತಮ ಆಡಳಿತ ಗೆದ್ದಿದೆ…
ಅಭಿವೃದ್ಧಿ ಗೆದ್ದಿದೆ…
ಜನಪರ ಮನೋಭಾವ ಗೆದ್ದಿದೆ…
ಸಾಮಾಜಿಕ ನ್ಯಾಯ ಗೆದ್ದಿದೆ.

2025ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಐತಿಹಾಸಿಕ ಮತ್ತು ಅಭೂತಪೂರ್ವ ಗೆಲುವಿನೊಂದಿಗೆ ಆಶೀರ್ವದಿಸಿದ್ದಕ್ಕಾಗಿ ಬಿಹಾರದಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಈ ಜನಾದೇಶವು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಹಾಗೂ ಬಿಹಾರಕ್ಕಾಗಿ ಕೆಲಸ ಮಾಡಲು ಇನ್ನಷ್ಟು ಶಕ್ತಿ ನೀಡುತ್ತದೆ. ಇದನ್ನೂ ಓದಿ: ಮಹಿಳೆಯರಿಗೆ 10,000 ರೂ. ಗ್ಯಾರಂಟಿಯೇ ಗೇಮ್‌ ಚೇಂಜರ್‌ – 10ನೇ ಬಾರಿಗೆ ಸಿಎಂ ಪಟ್ಟದ ಮೇಲೆ ನಿತೀಶ್‌ ಕಣ್ಣು!

ಹಾಗೆಯೇ ದಣಿವರಿಯದೇ ಕೆಲಸ ಮಾಡಿದ ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರಿಗೂ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಏಕೆಂದ್ರೆ ಅವರು ಪ್ರತಿಯೊಬ್ಬ ಸಾರ್ವಜನರನ್ನ ತಲುಪಿದ್ದು, ನಮ್ಮ ಅಭಿವೃದ್ಧಿ ಕಾರ್ಯಸೂಚಿಗಳನ್ನ ತಲುಪಿಸಿದ್ದಾರೆ. ಜೊತೆ ವಿರೋಧ ಪಕ್ಷಗಳ ಪ್ರತಿಯೊಂದು ಸುಳ್ಳನ್ನು ಬಲವಾಗಿ ಎದುರಿಸಿ, ಅದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

ಮುಂಬರುವ ದಿನಗಳಲ್ಲಿ, ಬಿಹಾರವನ್ನು ಅಭಿವೃದ್ಧಿಪಡಿಸಲು ಜೊತೆಗೆ ಬಿಹಾರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನ ಹೆಚ್ಚಿನದ್ದಾಗಿ ಕಲ್ಪಿಸಲು. ರಾಜ್ಯದ ಸಂಸ್ಕೃತಿಗೆ ಹೊಸತನ ನೀಡಲು ನಾವು ದಣಿವರಿಯದೇ ಕೆಲಸ ಮಾಡುತ್ತೇವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಯುವಕರು ಮತ್ತು ಮಹಿಳೆಯರ ಸಮೃದ್ಧ ಜೀವನಕ್ಕಾಗಿ ಸಾಕಷ್ಟು ಅವಕಾಶಗಳನ್ನ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

Share This Article