ಹಾಸನ: ಚಾಲಕನ ನಿತಂತ್ರಣ ತಪ್ಪಿ ಸಾರಿಗೆ ಬಸ್ (Bus) ಮರಕ್ಕೆ ಡಿಕ್ಕಿಯಾದ (Accident) ಘಟನೆ ಅರಸೀಕೆರೆಯ (Arasikere) ಗೀಜಿಹಳ್ಳಿ ಬಳಿ ನಡೆದಿದೆ. ಬಸ್ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಐವರ ಸ್ಥಿತಿ ಗಂಭಿರವಾಗಿದೆ.
ಪುತ್ತೂರು ಡಿಪೋದ ಬಸ್ ಮಡಿಕೇರಿ ಕಡೆಗೆ ತೆರಳುತ್ತಿತ್ತು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮಕ್ಕೆ ಬಸ್‍ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜುಗಿದೆ. ಇದನ್ನೂ ಓದಿ: ಸೈಡ್ ಬಿಡದಿದ್ದಕ್ಕೆ ಕಿರಿಕ್ – ಕಾರಿನಿಂದ ಗುದ್ದಿಸಿ ಬೈಕ್‌ನಲ್ಲಿದ್ದ ಮೂವರ ಕೊಲೆಗೆ ಯತ್ನಿಸಿದ ಟೆಕ್ಕಿ
ಗಾಯಾಳುಗಳಿಗೆ ಅರಸೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಬಳಸಿ ಬಸ್‍ನ್ನು ತೆರವುಗೊಳಿಸಲಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: Ramanagara | ವೈಯಕ್ತಿಕ ದ್ವೇಷಕ್ಕೆ ಯುವಕನ ಬರ್ಬರ ಹತ್ಯೆ
