ಪ್ರಿಯಾಂಕಾ ಚೋಪ್ರಾ ‘ಮಂದಾಕಿನಿ’ ಪೋಸ್ಟರ್ ರಿವೀಲ್

Public TV
1 Min Read

ಎಸ್‌ಎಸ್‌ ರಾಜಮೌಳಿ (S. S. Rajamouli) ಮತ್ತು ಮಹೇಶ್‌ ಬಾಬು (Mahesh Babu) ನಟನೆಯ ಬಹುನಿರೀಕ್ಷಿತ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಇದೀಗ ಇದೇ ಸಿನಿಮಾದಿಂದ ಮತ್ತೊಂದು ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ. ನವೆಂಬರ್ 15 ರಂದು ನಡೆಯಲಿರುವ “ಗ್ರ್ಯಾಂಡ್ ಗ್ಲೋಬ್ ಟ್ರಾಟರ್” ಕಾರ್ಯಕ್ರಮಕ್ಕೂ ಮುನ್ನವೇ ಮಂದಾಕಿನಿಯಾಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಜೋನಸ್ ಅವರನ್ನು ಪರಿಚಯಿಸಿದ್ದಾರೆ ನಿರ್ದೇಶಕ ರಾಜಮೌಳಿ.

ಗ್ರ್ಯಾಂಡ್ ಗ್ಲೋಬ್ ಟ್ರಾಟರ್ ಇವೆಂಟ್‌ ಘೋಷಿಸಿದಾಗಿನಿಂದಲೂ, ಭಾರತವಷ್ಟೇ ಅಲ್ಲದೆ, ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿದೆ. ಈಗಾಗಲೇ ಇದೇ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್‌ ‘ಕುಂಭ’ನಾಗಿ ಕಾಣಿಸಿಕೊಳ್ಳಲಿದ್ದು, ಅವರ ಫಸ್ಟ್‌ ಲುಕ್‌ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ:  Bollywood | ಕಸಿ ಮಾಡಿಸಿದ್ದ ಸ್ತನ ತೆಗೆಸಲು ಮುಂದಾದ ಶೆರ್ಲಿನ್‌ ಚೋಪ್ರಾ

ರಾಜಮೌಳಿ ನವೆಂಬರ್‌ 15ರಂದು ಅದ್ಯಾವ ಕುತೂಹಲವನ್ನು ಬಿಚ್ಚಿಡಲಿದ್ದಾರೆ ಎನ್ನುತ್ತಿರುವಾಗಲೇ, ಪ್ರಿಯಾಂಕಾ ಚೋಪ್ರಾ ಜೋನಸ್ ಅವರ ಪವರ್‌ಫುಲ್‌ ಲುಕ್‌ ಅನಾವರಣ ಮಾಡಿ, ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ. ಮಂದಾಕಿನಿಯಾಗಿ (Mandakini)  ಪೋಸ್ಟರ್‌ನಲ್ಲಿ ಹಳದಿ ಸೀರೆ ಧರಿಸಿ, ಕೈಯಲ್ಲಿ ಗನ್ ಹಿಡಿದು ಕಾಣಿಸಿದ್ದಾರೆ.

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನವೆಂಬರ್ 15 ರಂದು ನಡೆಯಲಿರುವ ಬೃಹತ್‌ ಕಾರ್ಯಕ್ರಮವನ್ನು ಈ ಒಂದು ಪೀಳಿಗೆಯಲ್ಲಿ ಒಮ್ಮೆ ಮಾತ್ರ ನಡೆಯುವ ಅದ್ಭುತ ಎಂದು ಬಣ್ಣಿಸಲಾಗುತ್ತಿದೆ. ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಈ ಕೌತುಕವನ್ನು 50,000 ಕ್ಕೂ ಹೆಚ್ಚು ಅಭಿಮಾನಿಗಳ ಆಗಮನವಾಗುವ ಸಾಧ್ಯತೆ ಇದೆ. ಇದು ಭಾರತೀಯ ಮನರಂಜನೆ ಜಗತ್ತಿನಲ್ಲಿ ಅತಿದೊಡ್ಡ ಲೈವ್ ಫ್ಯಾನ್ ಸಮಾಗಮಗಳಲ್ಲಿ ಒಂದಾಗಲಿದೆ.

Share This Article