ಮದುವೆಯಲ್ಲಿ ಸಖತ್ ಸ್ಟೆಪ್ ಹಾಕಿದ ಸುಧಾಮೂರ್ತಿ, ಕಿರಣ್ ಮಜುಂದಾರ್ ಷಾ – ವಿಡಿಯೋ ವೈರಲ್

1 Min Read

ಬೆಂಗಳೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಮದುವೆಯಲ್ಲಿ ಉದ್ಯಮಿ ಸುಧಾಮೂರ್ತಿ (Sudhamurty) ಹಾಗೂ ಕಿರಣ್ ಮಜುಂದಾರ್ ಶಾ (Kiran Mazumdar Shaw) ಭರ್ಜರಿ ಸ್ಟೆಪ್ ಹಾಕಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರ ಸೋದರಳಿಯನ ಮದುವೆ ಸಮಾರಂಭ ನಡೆಯಿತು. ಈ ವೇಳೆ ಸುಧಾಮೂರ್ತಿ ಹಾಗೂ ಕಿರಣ್ ಮಜುಂದಾರ್ ಷಾ ಅವರು ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಸುದೀಪ್‌ ನಟನೆಯ ಮಾರ್ಕ್‌ ಸಿನಿಮಾದ ಶೂಟಿಂಗ್‌ ಮುಕ್ತಾಯ

ಪಂಜಾಬಿ ಡೋಲ್ ನಾದಕ್ಕೆ ಉದ್ಯಮಿಗಳಿಬ್ಬರು ಸಖತ್ ಸ್ಟೆಪ್ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸುಧಾಮೂರ್ತಿ ಗುಲಾಬಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರೆ, ಚಿನ್ನದ ಬಣ್ಣದ ಸೀರೆಯಲ್ಲಿ ಕಿರಣ್ ಮಜುಂದಾರ್ ಷಾ ಕಾಣಿಸಿಕೊಂಡಿದ್ದಾರೆ.

Share This Article