ರಾಜೇಂದ್ರ ಸಿಂಗ್ ಬಾಬು ಅವರಿಲ್ಲದಿದ್ರೆ ನಾನು ಜೀರೋ : ಸುಹಾಸಿನಿ ಮನದಾಳ

1 Min Read

ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡ ಇಂಡಸ್ಟ್ರಿಯಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. 5 ದಿನಗಳ ಕಾಲ ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಸಾಧನೆ..ಸಂಭ್ರಮ..ಚಿತ್ರೋತ್ಸವ ಕಾರ್ಯಕ್ರಮ ನಡೆದಿದೆ. ಅಕ್ಟೋಬರ್ 23 ರಿಂದ 27ರವರೆಗೆ ರಾಜೇಂದ್ರಸಿಂಗ್ ಬಾಬು ಅವರ ಸಿನಿಮಾಗಳ ಪ್ರದರ್ಶನ, ಸಂವಾದ ಸಂಕೀರ್ಣ ಕಾರ್ಯಕ್ರಮಕ್ಕೆ ಅಕೋಬರ್ 27ರಂದು ಎಳೆಯಲಾಗಿದೆ.

ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ರಾಜೇಂದ್ರ ಸಿಂಗ್ ಬಾಬು ಅವರ ಆಪ್ತರು ಹಾಗೂ ಕುಟುಂಬಸ್ಥರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಸುಹಾಸಿನಿ ರಾಜೇಂದ್ರ ಸಿಂಗ್ ಬಾಬು ಅವರ ಒಟ್ಟಿಗಿನ ಒಡನಾಟ, ಸಿನಿಮಾ ಶೂಟಿಂಗ್ ದಿನಗಳನ್ನ ನೆನೆದಿದ್ದಾರೆ. ಜೊತೆಗೆ ಬಾಬು ಅವರು ಅವಕಾಶ ಕೊಡದೇ ಇದ್ದಿದ್ದರೇ ಸುಹಾಸಿನಿ ಏನೂ ಅಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: SVR @ 50 – ಕನ್ನಡ ಚಿತ್ರರಂಗದ ಗಣ್ಯರು ಭಾಗಿ

ಸರಳ, ಸಹಜ ಮಾತುಗಳಿಂದ ತಮ್ಮ ಗುರುಗಳಾದ ರಾಜೇಂದ್ರ ಸಿಂಗ್ ಅವರನ್ನ ಹಾಡಿ ಹೊಗಳಿದ್ದಾರೆ. ಬಂಧನ, ಮುತ್ತಿನ ಹಾರ ಸಿನಿಮಾಗಳ ಮೂಲಕ ಸಿನಿಮಾ ಮಂದಿಯ ಹೃದಯದಲ್ಲಿ ಈಗಲೂ ಹಚ್ಚೆ ಒತ್ತಿದ್ದಾರೆ ಸುಹಾಸಿನಿ. ಎಸ್‌ವಿಆರ್ @50 ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದ ಅವರು ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದು ಖುಷಿ ಕೊಟ್ಟಿದೆ. ನೂರೊಂದು ನೆನಪು ಎದೆಯಾಳದಿಂದ ಹಾಡು ವಂಡರ್‌ಫುಲ್ ಎಂದಿದ್ದಾರೆ. ಇನ್ನು ರಾಜೇಂದ್ರ ಸಿಂಗ್ ಬಾಬು ಅವರಿಗೆ ಸಲ್ಲಬೇಕಾದ ಗೌರ ಸಲ್ಲಿದೆ ಎಂದಿದ್ದಾರೆ.

Share This Article