ಪ್ರತಿ ಭಾನುವಾರ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಫಾರ್ಮ್‌ಹೌಸ್‌ಗೋ ಅಥವಾ ದೇವಸ್ಥಾನಕ್ಕೋ ಭೇಟಿ ಕೊಡ್ತಾರೆ. ಅದರಂತೆ ಈ ಭಾನುವಾರ ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟು ತೆಂಗಿನಕಾಯಿ ಪ್ರಸಾದದ ಜೊತೆ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ದರ್ಶನ್ ಜೈಲಲ್ಲಿರುವ ಕಾರಣಕ್ಕೆ ಇದೀಗ ದರ್ಶನ್ ವ್ಯವಹಾರಗಳನ್ನೆಲ್ಲಾ ನೋಡಿಕೊಳ್ತಿರುವ ವಿಜಯಲಕ್ಷ್ಮಿ ಹೆಚ್ಚಾಗಿ ಫಾರ್ಮ್‌ಹೌಸ್‌ನ ಕೆಲಸಗಳನ್ನೆಲ್ಲಾ ಖುದ್ದಾಗಿ ಭೇಟಿಕೊಟ್ಟು ಪರಿಶೀಲಿಸುತ್ತಾರೆ. ವಾರದ ಮಧ್ಯೆ ದರ್ಶನ್‌ರನ್ನು ಭೇಟಿ ಮಾಡಲು ಜೈಲಿಗೆ ತೆರಳುವುದು. ಕೋರ್ಟ್ ಕಚೇರಿ ಕೆಲಸಗಳು ಹಾಗೂ ಮಗನ ವಿದ್ಯಾಭ್ಯಾಸದ ಕೆಲಸದಲ್ಲಿ ಬ್ಯುಸಿ ಇರ್ತಾರೆ. ಆದರೆ ವಾರಕ್ಕೊಮ್ಮೆಯಾದ್ರೂ ದೇವಸ್ಥಾನಗಳಿಗೆ ಭೇಟಿ ಕೊಡೋದನ್ನ ವಿಜಯಲಕ್ಷ್ಮಿಯವರು ಮಿಸ್ ಮಾಡೋದಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಿಗ್‌ಬಾಸ್ ಪ್ರಣಯ ಹಕ್ಕಿಗಳ ಪ್ರೇಮಕಥೆ ಪೀಕ್‌ಗೆ ತಲುಪಿತೇ?
ಕಷ್ಟದಲ್ಲೂ ನಗುತ್ತಿರಬೇಕು ಎಂಬ ಸಂದೇಶವನ್ನ ವಿಜಯಲಕ್ಷ್ಮಿ ಸದಾ ಪಾಲಿಸುತ್ತಾರೆ. ಒಂಟಿಯಾಗಿ ಹೋರಾಡುತ್ತಿದ್ದಾರೆ. ತಾವಾಯ್ತು ತಮ್ಮ ಕೆಲಸವಾಯ್ತು ಎಂದು ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ. ಇದೀಗ ದರ್ಶನ್‌ರ ಡೆವಿಲ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಮುಂದಿನ ಬಿರುಸಿನ ಪ್ರಚಾರದ ರೂಪುರೇಷೆ ಸಿದ್ಧ ಮಾಡೋದ್ರಲ್ಲೂ ತೊಡಗಿದ್ದಾರೆ ವಿಜಯಲಕ್ಷ್ಮಿ.

 
			 
                                
                              
		